ವಿದೇಶ

ಉದ್ಘಾಟನಾ ಉಡಾವಣೆಯಲ್ಲಿಯೇ ಚೈನಾದಲ್ಲಿ ಪತನವಾದ ಸಮುದ್ರ ವಿಮಾನ; 5 ಸಾವು

Guruprasad Narayana
ಬೀಜಿಂಗ್: ಶಾಂಗೈ ಹೊರವಲಯದಲ್ಲಿ ಉದ್ಘಾಟನಾ ಉಡಾವಣೆಯಲ್ಲಿಯೇ ಸಮುದ್ರವಿಮಾನ ಪತನವಾಗಿ ವಿಮಾನದಲ್ಲಿದ್ದ ಐವರು ಮೃತಪಟ್ಟಿದ್ದಾರೆ ಎಂದು ಚೈನಾ ಸರ್ಕಾರ ಒಡೆತನದ ಮಾಧ್ಯಮವೊಂದು ತಿಳಿಸಿದೆ. 
ಜಾಯ್ ಏರ್ ಜನರಲ್ ಏರ್ ನ ಸೆಸ್ನ 208ಬಿ, ಇಬ್ಬರು ಸಿಬ್ಬಂದಿ ಮತ್ತು ಎಂಟು ಅತಿಥಿಗಳನ್ನು ತನ್ನ ಮೊದಲ ಅಧಿಕೃತ ವಿಮಾನಯಾನದಲ್ಲಿ ಕೊಂಡೊಯ್ಯುತ್ತಿತ್ತು. ಬುಧವಾರ ಹೈವೇ ಸೇತುವೆ ಮೇಲೆ ಹಾರುವಾಗ ಪತನಗೊಂಡಿದೆ ಎಂದು 'ಡಾ ಪೇಪರ್' ಅಂತರ್ಜಾಲ ತಾಣ ತಿಳಿಸಿದೆ. 
ಬದುಕುಳಿದ ಐವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು 'ದ ಪೇಪರ್' ವರದಿ ಮಾಡಿದೆ. 
ಶಾಂಗೈನ ಜಿಂಶಾನ್ ಜಿಲ್ಲೆಯಿಂದ ಹೊರಟ ಸಮುದ್ರವಿಮಾನ 75 ಕಿಮೀ ದೂರದಲ್ಲಿರುವ ದಕ್ಷಿಣದ ಜೌಷನ್ ದ್ವೀಪದಲ್ಲಿ ಇಳಿಯಬೇಕಿತ್ತು. ವಾಣಿಜ್ಯ ನಗರಿಯಿಂದ, ಮೋಜಿಗಾಗಿ ದ್ವೀಪಗಳಲ್ಲಿ ಕಳೆದುಹೋಗ ಬಯಸುವವರಿಗೆ ಈ ಮಾರ್ಗವನ್ನು ವಿನ್ಯಾಸಗೊಳಿಸಲಾಗಿತ್ತು. 
ಈ ಪತನದ ಕಾರಣಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮ ವರದಿ ಮಾಡಿದೆ. 
ಸಮುದ್ರ ವಿಮಾನಗಳು ನೀರಿನಿಂದಲೇ ಉಡಾವಣೆಗೊಂಡು ನೀರಿನ ಮೇಲೆಯೇ ಇಳಿಯುವ ಸಾಮರ್ಥ್ಯ ಹೊಂದಿರುತ್ತವೆ. 
SCROLL FOR NEXT