ನ್ಯೂ ಜರ್ಸಿ: ಪೋಕ್ಮನ್ ಗೋ ಕ್ರೇಜ್ ಗೆ ಸಿಲುಕಿಕೊಂಡಿದ್ದ ಮಹಾಶಯನೋರ್ವ ಕೆಲಸವನ್ನೇ ತೊರೆದಿದ್ದ ಸುದ್ದಿ ಕೇಳಿದ್ದರೆ, ಅದು ಹಳೆಯ ಸುದ್ದಿ, ತಾಜಾ ಸುದ್ದಿ ಏನು ಅಂದ್ರೆ, ನ್ಯೂ ಜರ್ಸಿಯ ಮಹಿಳೆಯೋರ್ವಳು ಪೋಕ್ಮನ್ ಹಿಡಿಯುವ ಭರದಲ್ಲಿ ಮರ ಹತ್ತಿ ಕೆಳಗಿಳಿಯಲು ಹರಸಾಹಸ ಮಾಡಿದ ಘಟನೆ ನಡೆದಿದೆ.
ಸ್ಮಾಶಾನದಲ್ಲಿ ಪೋಕ್ಮನ್ ಗೋ ಗೇಮ್ ಆಡುತ್ತಿದ್ದ ಮಹಿಳೆ, ಆತ ಆಡುವ ಭರದಲ್ಲಿ ಮರ ಹತ್ತಿ ಕೊನೆಗೆ ಮರ ಇಳಿಯಲು 911 ಗೆ ಕರೆ ಮಾಡಿ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಮರದಲ್ಲಿ ಸಿಲುಕಿಕೊಂಡ ಮಹಿಳೆಯನ್ನು ಈಸ್ಟ್ ಗ್ರೀನ್ವಿಚ್ ಟೌನ್ ಶಿಪ್ ಫೈರ್ ಪಡೆ ರಕ್ಷಣೆ ಮಾಡಿಡೆ.
ಈ ಘಟನೆಯಿಂದ ಮಹಿಳೆ ಮುಜುಗರಕ್ಕೊಳಗಾಗಿದ್ದು, ಆಕೆಗೆ ಮತ್ತಷ್ಟು ಮುಜುಗರ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ರಕ್ಷಣಾ ಪಡೆಗಳು ಆಕೆಯ ಹೆಸರನ್ನು ಬಹಿರಂಗಗೊಳಿಸಿಲ್ಲ. ಈ ಘಟನೆಯಿಂದ ಎಚ್ಚೆತ್ತಿರುವ ನ್ಯೂ ಜೆರ್ಸಿಯ ರಕ್ಷಣಾ ಪಡೆಗಳು, ಜನರಿಗೆ ತಾವು ಯಾವ ಪ್ರದೇಶದಲ್ಲಿ ಪೋಕ್ಮನ್ ಗೋ ಗೇಮ್ ಆಡುತ್ತಿದ್ದೇವೆ ಎಂಬ ಬಗ್ಗೆ ಗಮನವಿರಲಿ ಎಂದು ಫೇಸ್ ಬುಕ್ ಪೇಜ್ ನಲ್ಲಿ ಎಚ್ಚರಿಕೆ ನೀಡಿದೆ.