ಇಸಿಸ್ ವಿರುದ್ಧ ಬ್ರಿಟೀಷ್ ಯೋಧರ ಕಾರ್ಯಾಚರಣೆ (ಸಂಗ್ರಹ ಚಿತ್ರ) 
ವಿದೇಶ

ಇಸಿಸ್ ಉಗ್ರಗಾಮಿಗಳನ್ನು ಮಣಿಸಲು ಬ್ರಿಟೀಷ್ ಯೋಧರಿಗೆ ಸಿಕ್ತು ವಿಶೇಷ ಅಸ್ತ್ರ!

ಇಡೀ ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ವಿಶ್ವದ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಅನ್ನು ಮಣಿಸಲು ಬ್ರಿಟೀಷ್ ಯೋಧರು ವಿಶೇಷ ಅಸ್ತ್ರವೊಂದನ್ನು ಕಂಡುಕೊಂಡಿದ್ದಾರಂತೆ...

ಲಂಡನ್: ಇಡೀ ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ವಿಶ್ವದ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಅನ್ನು ಮಣಿಸಲು ಬ್ರಿಟೀಷ್ ಯೋಧರು ವಿಶೇಷ ಅಸ್ತ್ರವೊಂದನ್ನು  ಕಂಡುಕೊಂಡಿದ್ದಾರಂತೆ. ಉಗ್ರರನ್ನು ಸದೆ ಬಡಿಯಲು ಬ್ರಿಟೀಷ್ ಯೋಧರು ಬಳಕೆ ಮಾಡುತ್ತಿರುವ ಆ ವಿಶೇಷ ಅಸ್ತ್ರವೇನೆಂದು ಗೊತ್ತೆ ಅದು "ಬಾಲಿವುಡ್ ಸಂಗೀತ"..

ಅರೆ ಇದು ಅಚ್ಚರಿಯಾದರೂ ಸತ್ಯ.. ಇರಾಕ್ ಮತ್ತು ಸಿರಿಯಾದ ಯುದ್ಧ ಭೂಮಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಮಣಿಸಲು ಬ್ರಿಟೀಷ್ ಯೋಧರು ಭಾರತದ ಬಾಲಿವುಡ್ ಸಂಗೀತವನ್ನು  ಬಳಕೆ ಮಾಡುತ್ತಿದ್ದಾರಂತೆ. ಈ ವಿಚಾರವನ್ನು ಗುಪ್ತಚರ ಮೂಲಗಳು ತಿಳಿಸಿದ್ದು, ಪಾಕಿಸ್ತಾನದ ಗುಪ್ತಚರ ಇಲಾಖೆಯ ಅಧಿಕಾರಿಗಳು ನೀಡಿದ ಸಲಹೆ ಮೇರೆಗೆ ಬ್ರಿಟೀಷ್ ಸೈನ್ಯಾಧಿಕಾರಿಗಳು  ಇಸಿಸ್ ಉಗ್ರರ ವಿರುದ್ಧ ಬಾಲಿವುಡ್ ಸಂಗೀತವನ್ನು ಬಳಕೆ ಮಾಡಿಕೊಳ್ಳುಲು ಸೂಚನೆ ನೀಡಿದ್ದಾರಂತೆ.

ಪಾಕಿಸ್ತಾನದ ಗುಪ್ತಚರ ಇಲಾಖೆಯ ಅಧಿಕರಾರಿಗಳು ನೀಡಿರುವ ಮಾಹಿತಿಯಂತೆ ಸಿರಿಯಾ ಮತ್ತು ಇರಾಕ್ ನಲ್ಲಿ ಪ್ರಾಬಲ್ಯ ಸಾಧಿಸಿರುವ ಇಸಿಸ್ ಉಗ್ರರಿಗೆ ಭಾರತದ ಬಾಲಿವುಡ್ ಸಂಗೀತ  ಅಥವಾ ಹಾಡುಗಳೆಂದರೆ ಭಾರಿ ಕಿರಿಕಿರಿಯಂತೆ. ಬಾಲಿವುಡ್ ಸಂಗೀತವನ್ನು ಉಗ್ರರು ಇಸ್ಲಾಮೇತರ ಎಂದು ಪರಿಗಣಿಸಿದ್ದು, ಅದನ್ನು ಯಾವುದೇ ಕಾರಣಕ್ಕೂ ಕೇಳಲು ಇಷ್ಟಪಡುವುದಿಲ್ಲ. ಇದೇ  ಕಾರಣಕ್ಕಾಗಿ ಬ್ರಿಟೀಷ್ ಯೋಧರು ಇಸಿಸ್ ಉಗ್ರರನ್ನು ಸದೆ ಬಡಿಯಲು ಬಾಲಿವುಡ್ ಸಂಗೀತವನ್ನು ಬಳಕೆ ಮಾಡುತ್ತಿದ್ದಾರಂತೆ.

ಇಸಿಸ್ ಉಗ್ರರ ವಿರುದ್ಧ ಲಿಬಿಯಾ ಸೈನಿಕರೊಂದಿಗೆ ಸೇರಿ ಸಿರ್ತೆ ಯುದ್ಧ ಭೂಮಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬ್ರಿಟೀಷ್ ಯೋಧರು ಗಡಿ ಪ್ರದೇಶದಲ್ಲಿ ತಮ್ಮ ಕಾರುಗಳನ್ನು ನಿಲ್ಲಿಸಿ  ಜೋರಾಗಿ ಬಾಲಿವುಡ್ ಹಾಡುಗಳನ್ನು ಹಾಕುತ್ತಾರಂತೆ. ಇದರಿಂದ ತೀವ್ರ ಕಿರಿಕಿರಿ ಅನುಭವಿಸುವ ಉಗ್ರರು ತಮ್ಮ ಅಡಗು ತಾಣಗಳಿಂದ ಹೊರಬಂದು ಈ ಬಗ್ಗೆ ದೂರು ನೀಡಲು ಮುಂದಾದಾಗ  ಅವರನ್ನು ಕೊಲ್ಲಲಾಗುತ್ತಿದೆಯಂತೆ. ಅಲ್ಲದೆ ಅವರ ಅಡಗುತಾಣಗಳನ್ನು ಇದೇ ಕಾರ್ಯಾಚರಣೆ ಮೂಲಕ ಬ್ರಿಟೀಷ್ ಯೋಧರು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಬ್ರಿಟೀಷ್ ಸೇನೆಯ ಮಾನಸಿಕ ಕಾರ್ಯಾಚರಣೆ ಘಟಕ ಇಸಿಸ್ ಉಗ್ರರ ಕರೆಗಳನ್ನು ಕದ್ದಾಲಿಸಿದ್ದು, ಬಾಲಿವುಡ್ ಸಂಗೀತದ  ಮೂಲಕ ಅವರ ಧೈರ್ಯವನ್ನು ಕುಂದಿಸುವುದೇ ಈ ಘಟಕದ ಪ್ರಮುಖ ಗುರಿಯಾಗಿದೆ. ಈ ಘಟಕ ತಯಾರಿಸಿರುವ ವರದಿಯನ್ವಯ ಇಸಿಸ್ ಉಗ್ರರು ಬಾಲಿವುಡ್ ಹಾಡುಗಳನ್ನು ನೋಡುವುದೇ  ದೊಡ್ಡ ಅವಮಾನವಂತೆ. ಹೀಗಾಗಿ ಇದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ಬ್ರಿಟೀಷ್ ಯೋಧರು ಬಂಧಿತ ಇಸಿಸ್ ಉಗ್ರರಿಗೆ ಬಾಲಿವುಡ್ ಹಾಡುಗಳನ್ನು ತೋರಿಸಿ ಹಿಂಸೆ ನೀಡಿ ಉಗ್ರ  ಸಂಘಟನೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಖ್ಯಾತ ದೈನಿಕವೊಂದು ವರದಿ ಮಾಡಿದೆ.

ಒಟ್ಟಾರೆ ಇಡೀ ವಿಶ್ವದ ಗಮನ ಸೆಳೆದಿರುವ ಬಾಲಿವುಡ್ ಚಿತ್ರ ಜಗತ್ತು ಇದೀಗ ಇಸಿಸ್ ಉಗ್ರರರನ್ನು ಸದೆಬಡಿಯಲು ಪರೋಕ್ಷವಾಗಿ ಕಾರಣವಾಗುತ್ತಿರುವುದು ಅಚ್ಚರಿಯೇ ಸರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT