ವಿದೇಶ

ಗಲ್ಭ್ ನಲ್ಲಿರುವ ಭಾರತೀಯರ ಸಹಾಯಕ್ಕೆ ಸಿದ್ಧ: ಪ್ರಧಾನಿ ಮೋದಿ

Mainashree
ದೋಹಾ: ಗಲ್ಫ್ ದೇಶಗಳಲ್ಲಿ ದುಡಿಯುತ್ತಿರುವ ಭಾರತೀಯ ಉದ್ಯೋಗಿಗಳಿಗೆ ಎಲ್ಲಾ ರೀತಿಯ ಸಹಾಯ ಮಾಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ. 
ಕಠಿಣ ಪರಿಶ್ರಮವಹಿಸಿ ದುಡಿಯಿರಿ, ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ನಿಮಗೆ ಭಾರತದಿಂದ ಎಲ್ಲಾ ರೀತಿಯಾ ಸಹಾಯ ಮಾಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ನಿಮಗೆಲ್ಲಾ ನಾನು ಗೊತ್ತಿರುವುದಿಲ್ಲ. ಆದರೆ ಭಾರತದಿಂದ ಯಾರೋ ನಮ್ಮನ್ನು ಭೇಟಿ ಮಾಡಲು ಬಂದಿದ್ದಾರೆಂದು ಸಂತಸ ಪಡುತ್ತೀರಿ. ಅಷ್ಟು ಸಾಕು ನನಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಮುದಾಯವನ್ನುದ್ದೇಶಿಸಿ ಹೇಳಿದ್ದಾರೆ. 
ಗಲ್ಫ್ ನಲ್ಲಿ ಆಯೋಜಿಸಲಾಗಿದ್ದ ಭಾರತದ ವೈದ್ಯರ ಸಮೂಹ ಮತ್ತು ಭಾರತ ನಾಗರಿಕ ಸಮೂಹದ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮನ್ನು ಭೇಟಿಯಾಗುವುದೇ ನನ್ನ ಮೊದಲ ಕಾರ್ಯಕ್ರಮ. ನಾನು ನಿಮಗೆ ಒಳ್ಳೆ ಸುದ್ದಿ ತಂದಿದ್ದೇನೆ. ಭಾರತದಲ್ಲಿ ಈ ಬಾರಿ ಮುಂಗಾರು ಚೆನ್ನಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಮಿಕರಿಗೆ ಆರೋಗ್ಯ ಸಮಸ್ಯೆ ಇರುವ ಬಗ್ಗೆ ವಿಚಾರಣೆ ನಡೆಸಿದೆ. ಅನಾರೋಗ್ಯಕ್ಕೆ ತುತ್ತಾಗಿರುವ ಭಾರತೀಯ ನೌಕರರಿಗೆ ಉತ್ತಮ ಚಿಕಿತ್ಸೆ ಅಗತ್ಯ. ಹಾಗಾಗಿ, ಭಾರತೀಯ ಉದ್ಯೋಗಿಗಳು ತಮ್ಮ ಆರೋಗ್ಯದತ್ತ ಕಾಳಜಿ ವಹಿಸಬೇಕು. ಭಾರತ ನಿಮಗೆ ಎಲ್ಲಾ ರೀತಿಯಲ್ಲೂ ನೆರವಾಗಲಿದೆ ಎಂದು ಭರವಸೆ ನೀಡಿದ್ದಾರೆ.
SCROLL FOR NEXT