ವಿದೇಶ

ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಸ್ವಿಟ್ಜರ್ಲ್ಯಾಂಡ್ ಬೆಂಬಲ

Srinivas Rao BV

ಜಿನೀವಾ: ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಭಾರತ ಸೇರ್ಪಡೆಯಾಗುವುದಕ್ಕೆ ಸ್ವಿಟ್ಜರ್ಲ್ಯಾಂಡ್ ಬೆಂಬಲ ನೀಡಿದೆ.
"ಭಾರತಕ್ಕೆ ಎನ್ಎಸ್ ಜಿ ಸೇರ್ಪಡೆಯಾಗುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಜೊಹಾನ್ ಷ್ನೇಯ್ಡರ್ ಅಮಾನ್ ಹೇಳಿದ್ದಾರೆ.
ಪರಮಾಣು ಪೂರೈಕೆದಾರ ಸಮೂಹಕ್ಕೆ ಸೇರ್ಪಡೆಯಾಗುವುದಕ್ಕೆ ಭಾರತ ಅನೇಕ ವರ್ಷಗಳಿಂದ ಯತ್ನಿಸುತ್ತಿದೆ. ಭಾರತದ ಪ್ರತಿ ಪ್ರಯತ್ನದಲ್ಲೂ ಚೀನಾ ಅಡ್ಡಗಾಲು ಹಾಕುತ್ತಿದೆ. ಈಗ ಸ್ವಿಟ್ಜರ್ಲ್ಯಾಂಡ್ ನಿಂದ ಬೆಂಬಲ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತದ ಪರಮಾಣು ಪೂರೈಕೆದಾರ ಸಮೂಹಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ವಿಜಯ ಸಾಧಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.  ಸ್ವಿಟ್ಜರ್ಲ್ಯಾಂಡ್ ನ ಬೆಂಬಲಕ್ಕೆ ಧನ್ಯವಾದ ಅರ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ಸಂಸ್ಥೆಗಳ ಸುಧಾರಣೆಗೆ ಸ್ವಿಟ್ಜರ್ಲ್ಯಾಂಡ್- ಭಾರತ ಬದ್ಧತೆ ಹೊಂದಿವೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪರಸ್ಪರ ಬೆಂಬಲ ನೀಡಲು ಒಪ್ಪಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT