ಸತಿ-ಪತಿ ಪರಸ್ಪರ ಪರಿಚಯಕ್ಕೂ ಮುಂಚೆ ತೆಗೆದ ಫೋಟೊ; ಕಾಕತಾಳಿಯಕ್ಕೊಂದು ಒಳ್ಳೆಯ ನಿದರ್ಶನ 
ವಿದೇಶ

ಸತಿ-ಪತಿ ಪರಸ್ಪರ ಪರಿಚಯಕ್ಕೂ ಮುಂಚೆ ತೆಗೆದ ಫೋಟೊ; ಕಾಕತಾಳಿಯಕ್ಕೊಂದು ಒಳ್ಳೆಯ ನಿದರ್ಶನ

ವಿವಾಹಕ್ಕೂ ಮುನ್ನ 14 ವರ್ಷಗಳ ಹಿಂದೆ ಇಬ್ಬರ ಕುಟುಂಬದ ಸದಸ್ಯರೂ ಕಾಕತಾಳಿಯವಾಗಿ ಒಂದೇ ಪ್ರದೇಶಕ್ಕೆ ಭೇಟಿ ನೀಡಿದ್ದು ಫೋಟೋದಲ್ಲಿ ದಾಖಲಾಗಿರುವುದು ಕಂಡುಬಂದಿದೆ.

ಬೀಜಿಂಗ್: ಹೊಸದಾಗಿ ವಿವಾಹವಾದ ಚೀನಾ ದಂಪತಿಗಳು ತಮ್ಮ ಹಳೆಯ ಫೋಟೊಗಳನ್ನು ತಿರುವಿ ಹಾಕುತ್ತಿರಬೇಕಾದರೆ, ವಿವಾಹಕ್ಕೂ ಮುನ್ನ 14 ವರ್ಷಗಳ ಹಿಂದೆ ಇಬ್ಬರ ಕುಟುಂಬದ ಸದಸ್ಯರೂ ಕಾಕತಾಳಿಯವಾಗಿ ಒಂದೇ ಪ್ರದೇಶಕ್ಕೆ ಭೇಟಿ ನೀಡಿದ್ದು ಫೋಟೋದಲ್ಲಿ ದಾಖಲಾಗಿರುವುದು ಕಂಡುಬಂದಿದೆ.

ಪತಿಯ ಬಾಲ್ಯದ ಫೋಟೋಗಳನ್ನು ನೋಡುತ್ತಿದ್ದ ಲು-ಯಿಂಗಿನ್ ಗೆ ಆ ಫೋಟೋದ ಹಿನ್ನೆಲೆಯಲ್ಲಿ ತನ್ನ ತಾಯಿ ನಿಂತಿರುವ ದೃಶ್ಯ ದಾಖಲಾಗಿರುವುದು ಕಂಡುಬಂದಿದೆ. ನವಿವಾಹಿತ ಚೀನಾ ದಂಪತಿಗಳ ಪ್ರಕಾರ ಇಬ್ಬರ ಕುಟುಂಬದವರು 2000 ರಲ್ಲಿ ವುಕ್ಸಿ ನ ಲಿಂಗ್ ಮೌಂಟೇನ್ ನಲ್ಲಿರುವ ಬೃಹತ್ ಬುದ್ಧನ ಪ್ರತಿಮೆ ವೀಕ್ಷಿಸಲು ಬಂದಿದ್ದಾರೆ. ಆಗ ಲು-ಯಿಂಗಿನ್ ನ ಪತಿ ಝಾಂಗ್ ಹಿಡಾಂಗ್ ಗೆ ಇನ್ನೂ 14 ವರ್ಷ ವಯಸ್ಸು. ಝಾಂಗ್ ಫೋಟೋ ಗೆ ಪೋಸ್ ನೀಡಿದ್ದ ಪ್ರದೇಶದ ಆಸುಪಾಸಿನಲ್ಲಿ ಲು-ಯಿಂಗಿನ್ ನ ತಾಯಿ ನಿಂತಿರುವುದು ಫೋಟೋದಲ್ಲಿ ಆಕಸ್ಮಿಕವಾಗಿ ದಾಖಲಾಗಿದೆ. ಇದನ್ನು ಪರಿಶೀಲಿಸಿದಾಗ ಲು-ಇಂಗಿನ್ ನ ತಾಯಿಯೇ ಆ ಫೋಟೊದಲ್ಲಿರುವ ಮಹಿಳೆ ಎಂಬುದು ಸ್ಪಷ್ಟವಾಗಿದ್ದು, ಕಾಕತಾಳೀಯಕ್ಕೊಂದು ಒಳ್ಳೆಯ ನಿದರ್ಶನ ದೊರೆತಂತಾಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!