ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ (ಸಂಗ್ರಹ ಚಿತ್ರ) 
ವಿದೇಶ

ಭಾರತದ ಅಭಿವೃದ್ಧಿ ನೆರೆ ರಾಷ್ಟ್ರಕ್ಕೂ ಪ್ರಯೋಜನ ಆಗುವಂತಾಗಬೇಕು: ಮೋದಿ

ಭಾರತದ ಆರ್ಥಿಕ ಬೆಳವಣಿಗೆ ನೆರೆರಾಷ್ಟ್ರಕ್ಕೂ ಪ್ರಯೋಜನೆವಾಗುವಂತೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ...

ಕೊಲಂಬೋ: ಭಾರತದ ಆರ್ಥಿಕ ಬೆಳವಣಿಗೆ ನೆರೆರಾಷ್ಟ್ರಕ್ಕೂ ಪ್ರಯೋಜನೆವಾಗುವಂತೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.

ಜಾಫ್ನಾದಲ್ಲಿ ಭಾರತದ ಸಹಭಾಗಿತ್ವದೊಂದಿಗೆ ಪುನರ್ ನಿರ್ಮಾಣಗೊಂಡ ದೊರೈಯಪ್ಪ ಕ್ರೀಡಾಂಗಣವನ್ನು ಉದ್ಘಾಟಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಅವರು, ಪ್ರಗತಿಯಲ್ಲಿ ತನ್ನದೇ ಸ್ವಂತ ಹಾದಿಯಲ್ಲಿ ಸಾಗುತ್ತಿರುವ ಶ್ರೀಲಂಕಾದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಲು ಭಾರತ ಸಿದ್ಧವಿದೆ ಎಂದು ಹೇಳಿದ್ದಾರೆ.

ಉಭಯ ರಾಷ್ಟ್ರಗಳ ಸಂಬಂಧ ಸರ್ಕಾರದ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಇತಿಹಾಸ, ಸಂಸ್ಕೃತಿ, ಭಾಷೆ, ಕಲೆ, ಭೌಗೋಳಿಕಗಳಲ್ಲಿಯೂ ನಮ್ಮ ಸಂಬಂಧ ಬೆಸೆದಿವೆ. ಭಾರತದ ಆರ್ಥಿಕ ಅಭಿವೃದ್ಧಿಯು ನೆರೆ ರಾಷ್ಟ್ರಕ್ಕೂ ಪ್ರಯೋಜನವಾಗಬೇಕೆಂದು ನಾವು ನಂಬಿಕ್ಕೇವೆ.

20 ವರ್ಷಗಳ ಬಳಿಕ ದೊರೈಯಪ್ಪ ಕ್ರೀಡಾಂಗಣದ ಮೂಲಕ ಮತ್ತೆ ಎರಡು ರಾಷ್ಟ್ರಗಳು ಸಂತಸದಲ್ಲಿರುವಂತೆ ಮಾಡಿದೆ. ಸಾವಿರದಷ್ಟು ದೂರದಲ್ಲಿ ನಾವು ದೆಹಲಿಯಲ್ಲಿದ್ದರೂ, ಜಫ್ನಾದ ವಾತಾವರಣದಲ್ಲಿ ಕೊಂಚ ಏರುಪೇರಾದರೂ ನಮ್ಮ ನಾಡಿಗೆ ಅದರ ಸ್ಪಂದನೆ ಕೇಳಿಸುತ್ತಿರುತ್ತದೆ.

ದೊರೈಯಪ್ಪ ಕ್ರೀಡಾಂಗಣ ಕೇವಲ ಕಲ್ಲು, ಇಟ್ಟಿಗೆಯ ಕಟ್ಟಡವಲ್ಲ. ಇದು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದೆ. ಕಳೆದ ವರ್ಷ ಜಾಫ್ನಾಗೆ ಭೇಟಿ ನೀಡಿದಾಗ ಪಡೆದ ಪ್ರೀತಿ ಮತ್ತು ಆತ್ಮೀಯತೆ ಈಗಲೂ ಮರೆಯಾಗದಂತೆ ಅಚ್ಛಳಿಯಂತೆ ಉಳಿದಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸ್ಟೇಡಿಯಂ ಪುನರ್ ನಿರ್ಮಾಣಕ್ಕೆ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ಭಾರತ ಮತ್ತು ಶ್ರೀಲಂಕಾದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿರುವ ಐತಿಹಾಸಿಕ ಸಮಾರಂಭ ಇದಾಗಿದೆ ಎಂದು ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮತ್ತ ಎಷ್ಟೇ ಬೆರಳು ತೋರಿದರೂ, ಅಲ್ಪಸಂಖ್ಯಾತರ ಮೇಲೆ ನಿಮ್ಮ ದೌರ್ಜನ್ಯ ಮುಚ್ಚಿಡಲು ಸಾಧ್ಯವಿಲ್ಲ- ಪಾಕ್ ಗೆ ಭಾರತದ ತಿರುಗೇಟು!

ಅನಧಿಕೃತ ಮನೆಗಳ ತೆರವು: ಕೋಗಿಲು ಲೇಔಟ್​​ಗೆ ಡಿ.ಕೆ ಶಿವಕುಮಾರ್ ಭೇಟಿ; ಡಿಸಿಎಂ ಹೇಳಿದ್ದೇನು? Video

ಬೆಂಗಳೂರು: ಕಿರುತೆರೆ ನಟಿ ನಂದಿನಿ ಆತ್ಮಹತ್ಯೆಗೆ ಶರಣು

ಮಾದಕ ವಸ್ತು ತಡೆ: ನಿರ್ಲಕ್ಷ್ಯಕ್ಕಾಗಿ ಮೂವರು ಇನ್ಸ್‌ಪೆಕ್ಟರ್‌ಗಳ ಅಮಾನತು

ಲಂಕಾ ಹನಿಮೂನ್ ನಲ್ಲಿ 'ಹಳೇ ಲವರ್' ವಿಚಾರಕ್ಕೆ ಜಗಳ! ನವದಂಪತಿ ಸೂಸೈಡ್ ಗೆ ಇದೇ ಕಾರಣನಾ? ಕಣ್ಣೀರಿನಲ್ಲಿ ಮುಳುಗಿದ ಕುಟುಂಬ!

SCROLL FOR NEXT