ಓಂ ಚಿಹ್ನೆ ಶೂ 
ವಿದೇಶ

ಪಾಕಿಸ್ತಾನದಲ್ಲಿ ಓಂ ಚಿಹ್ನೆಯುಳ್ಳ ಶೂ ಮಾರಾಟ, ಅಸಹಾಯಕ ಸ್ಥಿತಿಯಲ್ಲಿ ಹಿಂದುಗಳು

ಹಿಂದೂ ಧರ್ಮದ ಪವಿತ್ರ ಓಂ ಚಿಹ್ನೆಯುಳ್ಳ ಚಪ್ಪಲಿಗಳನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದನ್ನು ಕಂಡರು...

ಇಸ್ಲಾಮಾಬಾದ್: ಹಿಂದೂ ಧರ್ಮದ ಪವಿತ್ರ ಓಂ ಚಿಹ್ನೆಯುಳ್ಳ ಚಪ್ಪಲಿಗಳನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದನ್ನು ಕಂಡರು ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಸಹಿಸಿಕೊಂಡು ಸಮ್ಮನಿರುವ ಸ್ಥಿತಿಯಲ್ಲಿದ್ದಾರೆ.

ಮುಸ್ಲಿಂ ಹಬ್ಬ ರಮ್ಜಾನ್ ಸಂದರ್ಭದಲ್ಲೇ ಚಪ್ಪಲಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಿಂಧ್ ಪ್ರಾಂತೀಯ ಸರ್ಕಾರ ಹಾಗೂ ತಾಂಡೋ ಆದಮ್ ಖಾನ್ ಪ್ರದೇಶದ ಸ್ಥಳೀಯಾಡಳಿತಾಧಿಕಾರಿಗಳಲ್ಲಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ ಎಂದು ಪಾಕಿಸ್ತಾನದ ಹಿಂದೂ ಪರಿಷತ್ತಿನ ಮುಖ್ಯ ಪೋಷಕರಾಗಿರುವ ರಮೇಶ್ ಕುಮಾರ್ ಹೇಳಿದ್ದಾರೆ.

ಈದ್ ಉಲ್ ಅಝಾ ಸಂದರ್ಭದಲ್ಲಿ ಹಿಂದೂಗಳ ಪವಿತ್ರ ಓಂ ಧಾರ್ಮಿಕ ಚಿಹ್ನೆ ಇರುವ ಶೂಗಳನ್ನು ಮಾರಾಟಗಾರರು ಮಾರುತ್ತಿರುವುದು ಅತ್ಯಂತ ದುರದೃಷ್ಟಕರ. ಇದರ ಸ್ಪಷ್ಟ ಉದ್ದೇಶ ಹಿಂದೂ ಬಾಂಧವರನ್ನು ಅವಮಾನಿಸುವುದೇ ಆಗಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ