ವಿದೇಶ

ಭಾರತದ ಎನ್ಎಸ್ ಜಿ ಅಗತ್ಯತೆ ಅರ್ಥವಾಗುತ್ತೆ, ಆದರೆ ಹೆಚ್ಚಿನ ಚರ್ಚೆಯಾಗಬೇಕು: ಚೀನಾ

Lingaraj Badiger
ಬೀಜಿಂಗ್: ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್‌ಎಸ್‌ಜಿ)ದ ಸದಸ್ಯತ್ವಕ್ಕೆ ತನ್ನ ವಿರೋಧವನ್ನು ಮುಂದುವರೆಸಿರುವ ಚೀನಾ, ಭಾರತ ಅಥವಾ ಇತರೆ ದೇಶಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವ ಬಗ್ಗೆ ವಿಸ್ತೃತ ಚರ್ಚೆಯಾಗಲಿ ಎಂದು ಮಂಗಳವಾರ ಕರೆ ನೀಡಿದೆ.
ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿದಂತೆ ಇಂದು ಚೀನಾದ ನಿಲವು ಸ್ಪಷ್ಟಪಡಿಸಿದ  ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುಯಿಂಗ್ ಅವರು, ಪರಮಾಣು ವಿದ್ಯುತ್ ಉತ್ಪಾದನೆಗಾಗಿ ಭಾರತದ ಎನ್ಎಸ್ ಜಿ ಸದಸ್ಯತ್ವದ ಅಗತ್ಯತೆ ನಮಗೂ ಅರ್ಥವಾಗಿದೆ. ಆದರೆ ಆ ಬಗ್ಗೆ 48 ಸದಸ್ಯ ರಾಷ್ಟ್ರಗಳೊಂದಿಗೆ ವಿಸ್ತೃತ ಚರ್ಚೆ ಮಾಡುವ ಅಗತ್ಯ ಇದೆ ಎಂದಿದ್ದಾರೆ. ಅಲ್ಲದೆ ಭಾರತಕ್ಕೆ ಎನ್ ಎಸ್ ಜಿ ಸದಸ್ಯ ನೀಡುವ ಬಗ್ಗೆ ಒಕ್ಕೂಟ ಸದಸ್ಯರಲ್ಲೇ ಭಿನ್ನಾಭಿಪ್ರಾಯವಿದೆ ಎಂದು ಹೇಳಿದ್ದಾರೆ. 
ನಿನ್ನೆಯಷ್ಟೇ ಜೂನ್ 24ರಂದು ಸಿಯೋಲ್ ನಲ್ಲಿ ನಡೆಯುವ 48 ಸದಸ್ಯರ ಎನ್ಎಸ್ ಜಿ ಸಭೆಯ ಕಾರ್ಯಸೂಚಿಯಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ಪ್ರಸ್ತಾಪ ಇಲ್ಲ ಎಂದು ಚುಯಿಂಗ್ ಸ್ಪಷ್ಟಪಡಿಸಿದ್ದರು. 
SCROLL FOR NEXT