ಕರಾಚಿ: ಖ್ಯಾತ ಪಾಕಿಸ್ತಾನಿ ಕವ್ವಾಲಿ ಗಾಯಕ ಅಮ್ಜದ್ ಸಾಬ್ರಿ ಅವರನ್ನು ಬುಧವಾರ ಗುರುತು ಹಚ್ಚದ ಹಂತಕರು ಗುಂಡಿಟ್ಟು ಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಲಿಯಾಕತಾಬಾದ್ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ದಾಳಿಕೋರರು ಗುಂಡಿನ ದಾಳಿ ನಡೆಸಿದಾಗ ಸಾಬ್ರಿ ಮತ್ತು ಅವರ ಸಹಚರ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ ಮೇಲೆ, ಸಾಬ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.