ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಎನ್ಎಸ್ ಜಿ ಸದಸ್ಯತ್ವ: ಭಾರತದ ವಿರುದ್ದ ಹರಿಹಾಯ್ದ ಚೀನಾ ಮಾಧ್ಯಮ

ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಚೀನಾ ಸರ್ಕಾರಿ ಮಾಧ್ಯಮ, ಎನ್ಎಸ್​ಜಿ ಸದಸ್ಯತ್ವ....

ಸಿಯೋಲ್ ನಲ್ಲಿ ನಡೆದ ಎನ್ಎಸ್ ಜಿ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಇತರರು
Lingaraj Badiger
Updated On : 28 Jun 2016, 5:07 am
ಬೀಜಿಂಗ್: ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಚೀನಾ ಸರ್ಕಾರಿ ಮಾಧ್ಯಮ, ಎನ್ಎಸ್​ಜಿ ಸದಸ್ಯತ್ವ ಪಡೆಯಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದನ್ನು ಭಾರತ ಮೊದಲು ತಿಳಿಯಲಿ ವಾಗ್ದಾಳಿ ನಡೆಸಿದೆ.
ಎನ್​ಎಸ್​ಜಿ ಸದಸ್ಯತ್ವ ಕೈತಪ್ಪಲು ಚೀನಾ ಕಾರಣ ಎಂದು ಭಾರತೀಯ ನಾಯಕರು ಆರೋಪಿಸಿರುವ ಹಿನ್ನೆಲೆಯಲ್ಲಿ ಚೀನಾದ ಗ್ಲೋಬಲ್ ಟೈಮ್್ಸ ಎಂಬ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಪತ್ರಿಕೆ ತನ್ನ ಸಂಪಾದಕೀಯದಲ್ಲಿ, ಭಾರತ ಮತ್ತು ಭಾರತೀಯ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದೆ.
ಪರಮಾಣು ಪ್ರಸರಣ ತಡೆ ಒಡಂಬಡಿಕೆಗೆ (ಎನ್​ಪಿಟಿ) ಸಹಿ ಹಾಕಿದ ದೇಶಗಳಿಗೆ ಮಾತ್ರ ಎನ್ಎಸ್ ಜಿ ಸದಸ್ಯತ್ವ ನೀಡಲಾಗಿದೆ. ಎನ್ಎಸ್ ಜಿ ಸದಸ್ಯತ್ವ ಪಡೆಯಲು ಪ್ರಾಥಮಿಕ ನಿಯಮಗಳಲ್ಲಿ ಇದು ಒಂದು. ಆದರೆ ಭಾರತ ಎನ್​ಪಿಟಿಗೆ ಸಹಿ ಹಾಕದೆ ಎನ್​ಎಸ್​ಜಿ ಸದಸ್ಯತ್ವ ಪಡೆಯಲು ಬಯಸುತ್ತಿದೆ. ಹಾಗಾಗಿ ಭಾರತದ ಸದಸ್ಯತ್ವವನ್ನು ವಿರೋಧಿಸುವುದು ಚೀನಾ ಮತ್ತು ಇತರ ರಾಷ್ಟ್ರಗಳ ನೈತಿಕ ಕಾನೂನುಬದ್ಧ ಹಕ್ಕು ಚೀನಾ ಮಾಧ್ಯಮ ವಾದಿಸಿದೆ.

Advertisement

Advertisement

ಚೀನಾ ಸೇರಿದಂತೆ ಒಟ್ಟು 10 ರಾಷ್ಟ್ರಗಳು ಭಾರತಕ್ಕೆ ಸದಸ್ಯತ್ವ ನೀಡದಂತೆ ವಿರೋಧಿಸಿವೆ ಎಂದು ಗ್ಲೋಬಲ್ ಟೈಮ್್ಸ ವರದಿ ಮಾಡಿದೆ.
ಕೇವಲ ಅಮೆರಿಕ ಬೆಂಬಲ ಸೂಚಿಸಿದ ಮಾತ್ರಕ್ಕೆ ಇಡೀ ವಿಶ್ವವೇ ಭಾರತಕ್ಕೆ ಬೆಂಬಲ ಸೂಚಿಸಿದಂತೆ ಆಗುವುದಿಲ್ಲ. ಅಮೆರಿಕವೊಂದೇ ಇಡೀ ವಿಶ್ವವಲ್ಲ. ಭಾರತ ಎಲ್ಲಾ ರಾಷ್ಟ್ರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಬೇಕು ಎಂದು ಚೀನಾ ಪತ್ರಿಕೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments