ಕೌಲಲಾಂಪೂರ್: ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮಲೇಷ್ಯಾದ ಪ್ರಧಾನಿ ನಜೀಬ್ ರಜಾಕ್ ಹಾಗೂ ಕೆಲ ಹಿರಿಯ ಸಚಿವರನ್ನು ಅಪಹರಿಸುವ ಯತ್ನವನ್ನು ವಿಫಲಗೊಳಿಸಲಾಗಿತ್ತು ಎಂದು ಉಪ ಪ್ರಧಾನಿ ಅಹ್ಮದ್ ಜಾಹಿದಿ ಹಮೀದಿ ಹೇಳಿದ್ದಾರೆ.
ಇದೇ ವೇಳೆ ಐಎಸ್ ಭಯೋತ್ಪಾದಕರು ಆಡಳಿತಾತ್ಮಕ ರಾಜಧಾನಿಯಾದ ಪುತ್ರಜಯ ಮೇಲೆ ದಾಳಿಗೂ ಸಂಚು ಹೂಡಿದ್ದರು. ಇದಕ್ಕಾಗಿ ಸ್ಫೋಟಕಗಳನ್ನು ತಯಾರಿಸಿ ಪರೀಕ್ಷೆ ನಡೆಸಿದ್ದರು ಎಂದು ಹಮೀದಿ ಹೇಳಿದ್ದಾರೆ.
ಮಲೇಷ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಅಧಿಕೃತ ನೆಲೆಯಿಲ್ಲದಿದ್ದರೂ ಅದರ ಕಾರ್ಯಕರ್ತರಿಗೆ ಹೊರಗಿನಿಂದ ಆದೇಶಗಳು ಬರುತ್ತಿವೆ ಎಂದು ಹೇಳಿದ್ದಾರೆ.