ಯಮುನಾ ನದಿ ತೀರದಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಸಂಭ್ರಮಿಸಿದ ಕಲಾವಿದರು
ನವದೆಹಲಿ: ಯಮುನಾ ನದಿ ತೀರದಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಪಾಕಿಸ್ತಾನದ 80 ಕಲಾವಿದರು ಪಾಲ್ಗೊಂಡು ಸಂಭ್ರಮಿಸಿದರು.
ನಿನ್ನೆ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಪಾಕಿಸ್ತಾನದಿಂದ 80 ಕಲಾವಿದರು ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳಿಂದ ಕಲಾವಿದರು ಮತ್ತು ಜನರು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ಶಾಂತಿ ಮತ್ತು ಪ್ರೀತಿಯನ್ನು ಹರಡಲು ಪ್ರಯತ್ನಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಕೊಂಡಿ ಬೆಸೆಯುವ ಪೂರಕ ವಾತಾವರಣವಿರುವುದು ಸಾಬೀತಾಗಿದೆ ಎಂದು ವಿದೇಶಿಗರು ಅಭಿಪ್ರಾಯಪಟ್ಟಿದ್ದಾರೆ.
ಈ ಉತ್ಸವದ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಾಂಧ್ಯವ ಬೆಸೆದಿದೆ. ಇದೇ ರೀತಿಯ ಕೆಲ ಹೆಜ್ಜೆಗಳನ್ನಿಟ್ಟರೆ ಸಾಮರಸ್ಯ ಮೂಡುವ ಪ್ರಯತ್ನಗಳು ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಪೇಶಾವರದ ಪ್ರಜೆ ಜಫರ್ ಉಲ್ ಖಾನ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಲಂಕಾ ಸಂಸತ್ ನ ಸ್ಪೀಕರ್ ಜಯಸೂರ್ಯ, ಫ್ರೆಂಚ್ ನ ಮಾಜಿ ಪ್ರದಾನಿ ಡೊಮಿನಿಕ್ ಡೇ ವಿಲ್ಲೆಪಿನ್, ನೇಪಾಳದ ಉಪ ಪ್ರಧಾನಿ ಕಮಲ್ ಥಾಪಾ, ಸುರಿನೇಮ್ ನ ಉಪಾಧ್ಯಕ್ಷ ಅಶ್ವಿನ್ ಅಧೀನ್ ಮತ್ತಿತರ ಗಣ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics