ಲಂಡನ್: ಲಂಡನ್ ನಲ್ಲಿ ಗೋಮೂತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅಲ್ಲಿನ ಪರಿಸರ ಆರೋಗ್ಯ ಸಲಹೆಯ ವಿರೋಧದ ನಡುವೆಯೂ ಇದೀಗ ಅಲ್ಲಿನ ಜನ ಆಹಾರ ಮಳಿಗೆಗಳಲ್ಲಿ ಗೋಮೂತ್ರ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಬ್ರಿಟನ್ ನಲ್ಲಿರುವ ದಕ್ಷಿಣ ಏಷ್ಯಾದ ಹಿಂದು ಸಮುದಾಯವರು ಗೋಮೂತ್ರಕ್ಕೆ ಬಹಳಷ್ಟು ಬೇಡಿಕೆಯನ್ನಿಟ್ಟು. ಅಲ್ಲಿನ ಹಿಂದೂಗಳು ಧಾರ್ಮಿಕ ಸಮಾರಂಭಗಳು, ಶಿಶು ಜನನರ ಹಾಗೂ ಇನ್ನಿತರೆ ಕಾರ್ಯಕ್ರಮಗಳಲ್ಲಿ ಗೋಮೂತ್ರವನ್ನು ಬಳಸುತ್ತಿದ್ದಾರೆ. ಹೀಗಾಗಿ ಲಂಡನ್ ನಲ್ಲಿ ಇದೀಗ ಆಹಾರ ಸಾಮಾಗ್ರಿಗಳ ಪೊಟ್ಟಣಗಳ ಜೊತೆಗೇ ಗೋಮೂತ್ರವನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಲಂಡನ್ ನಲ್ಲಿ ಮಾರಾಟವಾಗುತ್ತಿರುವ ಗೋಮೂತ್ರ ಬಾಟಲಿಗಳ ಮೇಲೆ ಹಿಂದಿಯಲ್ಲೇ ಹೆಸರನ್ನು ಮುದ್ರಿಸಲಾಗಿದ್ದು, ವ್ಯಾಟ್ ಫೋರ್ಡ್ ನಲ್ಲಿರುವ ಹರೇಕೃಷ್ಣ ದೇಗುಲದ ಆಡಳಿತ ಮಂಡಳಿಯು ಗೋಮೂತ್ರವನ್ನು ಪೂರೈತೆ ಮಾಡುತ್ತಿದೆ ಎನ್ನಲಾಗಿದೆ.