ಕ್ಯೂಬಾ-ಅಮೆರಿಕ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭ
ಅಮೆರಿಕ- ಕ್ಯೂಬಾ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಮಹತ್ವದ ಬೆಳವಣಿಗೆಯ ಭಾಗವಾಗಿ ಉಭಯ ರಾಷ್ಟ್ರಗಳ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭಗೊಂಡಿದೆ.
ಹವಾನಾ: ಅಮೆರಿಕ- ಕ್ಯೂಬಾ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಮಹತ್ವದ ಬೆಳವಣಿಗೆಯ ಭಾಗವಾಗಿ ಉಭಯ ರಾಷ್ಟ್ರಗಳ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭಗೊಂಡಿದೆ.
ಕ್ಯೂಬಾದ ಖಾಸಗಿ ಸಂಸ್ಥೆಯೊಂದು ಉಭಯ ದೇಶಗಳ ನಡುವೆ ನೇರ ವಿಮಾನ ಸಂಚಾರ ಸೌಲಭ್ಯ ಪುನಾರಂಭಗೊಂಡಿರುವುದನ್ನು ಸ್ಪಷ್ಟಪಡಿಸಿದೆ. ತಾಂತ್ರಿಕ, ಕಾರ್ಯಾಚರಣೆಯ ಮತ್ತು ಸುರಕ್ಷತೆ ವಿವರಗಳನ್ನು ಪರಿಶೀಲನೆ ನಡೆಸಿದ ನಂತರ ಅಮೆರಿಕ- ಕ್ಯೂಬಾದ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭ ಮಾಡಲಾಗಿದೆ. ಮಾ.16 ರಂದು ಮೊದಲ ಬಾರಿಗೆ ನೇರ ವಿಮಾನ ಸಂಚಾರ ಪ್ರಾರಂಭವಾಗಿದೆ.
ನೇರ ಸಂಚಾರ ಸೌಲಭ್ಯ ಸಾಧ್ಯವಾಗಿರುವುದರಿಂದ ಉಭಯ ದೇಶಗಳ ನಡುವೆ ಸರಕು ಸಾಗಣೆಗೆ ಅನುಕೂಲವಾಗಲಿದೆ. ನೇರ ಸಂಚಾರ ಪ್ರಾರಂಭಿಸಲು ಅಮೆರಿಕ- ಕ್ಯೂಬಾ 2015 ರ ಡಿ.11 ರಂದು ಒಪ್ಪಂದ ಮಾಡಿಕೊಂಡಿದ್ದವು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.