ವಿದೇಶ

40 ದಿನಗಳ ಬಳಿಕ ಭಾರತೀಯ ನಾವಿಕನನ್ನು ಬಿಡುಗಡೆ ಮಾಡಿದ ಕಡಲ್ಗಳ್ಳರು

Vishwanath S

ನವದೆಹಲಿ: ಸರಿಸುಮಾರು 40 ದಿನಗಳ ಬಳಿಕ ಒತ್ತೆಯಾಗಿರಿಸಿಕೊಂಡಿದ್ದ ಭಾರತೀಯ ನಾವಿಕನನ್ನು ಕಡಲ್ಗಳ್ಳರು ಬಿಡುಗಡೆ ಮಾಡಿದ್ದಾರೆ.

ನಿರಂತರ ಪ್ರಯತ್ನದ ಫಲವಾಗಿ ಭಾರತೀಯ ನಾವಿಕನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಫೆಬ್ರವರಿ 11 ರಂದು ಐವರಿ ಕೋಸ್ಟ್​ನಲ್ಲಿ ಕಡಲ್ಗಳ್ಳರು 11 ಭಾರತೀಯ ನಾವಿಕನನ್ನು ಅಪಹರಿಸಿದ್ದರು. ನಂತರ ಫೆಬ್ರವರಿ 19 ರಂದು ನೈಜೀರಿಯಾ ನೌಕಾಪಡೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ 10 ಭಾರತೀಯರನ್ನು ರಕ್ಷಿಸಲಾಗಿತ್ತು. ಆದರೆ ರೋಹನ್ ಅವರನ್ನು ಕಡಲ್ಗಳ್ಳರಿಂದ ಬಿಡುಗಡೆ ಮಾಡಿಸಲು ಸಾಧ್ಯವಾಗಿರಲಿಲ್ಲ.

ಭಾರತ ಸರ್ಕಾರ ಮತ್ತು ನೈಜೀರಿಯಾ ಸರ್ಕಾರ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ರೋಹನ್ ಅವರನ್ನು ಬಿಡುಗಡೆ ಮಾಡಿಸಲಾಗಿದೆ. ರೋಹನ್ ಭಾನುವಾರ ರಾತ್ರಿ ಸ್ವದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

SCROLL FOR NEXT