ಬ್ರೆಜಿಲ್: ಬ್ರೆಜಿಲ್ ನ ಸಾವೋ ಪೋಲೋದಲ್ಲಿ ವಿಮಾನ ಪತನಗೊಂಡಿದ್ದು, ಪೈಲೆಟ್ ಸೇರಿ 7 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಪತನಗೊಂಡ ವಿಮಾನ ಖಾಸಗಿ ವಿಮಾನವಾಗಿದ್ದು, ಕ್ಯೋಪೊ ಡಿ ಮರ್ತೆ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಟೇಕ್ ಆಫ್ ಆಗಿದೆ. ಆದರೆ, ಟೇಕ್ ಆಫ್ ಆದ ಕೆಲ ನಿಮಿಷಗಳಲ್ಲೇ ತಾಂತ್ರಿಕ ದೋಷದಿಂದಾಗಿ ಸಾವೋ ಪಾಲೋದಲ್ಲಿದ್ದ ವಸತಿ ಕಟ್ಟಡದ ಮೇಲೆ ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ.
ಈ ವೇಳೆ ವಿಮಾನದಲ್ಲಿ ಪೈಲೆಟ್ ಸೇರಿ 6 ಜನರು ದುರ್ಮರಣವನ್ನಪ್ಪಿದ್ದು, ಕಟ್ಟಡದ ಮೇಲೆ ಕುಸಿದ ಪರಿಣಾಮ ಕಟ್ಟದಲ್ಲಿದ್ದ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಪತನಗೊಂಡ ವಿಮಾನವು ಸಿಎ-9 ಮಾಡಲ್ ವಿಮಾನವಾಗಿದ್ದು, ಮಾಜಿ ವೇಲ್ ಸಿಇಒಗೆ ಸೇರಿದ ವಿಮಾನ ಇದಾಗಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಬ್ರೆಜಿಲ್ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.