ವಿದೇಶ

ಪಠಾಣ್ ಕೋಟ್ ದಾಳಿ: ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡ ಪಾಕ್ ತನಿಖಾ ತಂಡ

Mainashree
ನವದೆಹಲಿ: ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರ ದಾಳಿ ಪ್ರಕರಣದ ತನಿಖೆಗಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ತಂಡ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 
ಪಠಾಣ್ ಕೋಟ್ ಉಗ್ರ ದಾಳಿಯ ತನಿಖೆಗಾಗಿ ಕಳೆದ ಭಾನುವಾರ ದೆಹಲಿಗೆ ಆಗಮಿಸಿರುವ ಐವರು ಸದಸ್ಯರನ್ನೊಳಗೊಂಡ ಪಾಕ್ ಜಂಟಿ ತನಿಖಾ ತಂಡ, 16 ಸಾಕ್ಷಿಗಳನ್ನು ವಿಚಾರಣೆ ನಡೆಸಿ, ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಪಾಕ್ ತನಿಖಾ ತಂಡಕ್ಕೆ ದಾಳಿ ಹತ್ಯೆಯಾದ ಉಗ್ರರ ಡಿಎನ್ ಎ ವರದಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.  
ಪಂಜಾಬ್ ಉಗ್ರ ನಿಗ್ರಹ ಘಟಕ(ಸಿಟಿಡಿ) ಮುಖ್ಯಸ್ಥ, ಹೆಚ್ಚುವರಿ ಪೊಲೀಸ್ ಪ್ರಧಾನ ಆರಕ್ಷಕ ಮೊಹಮ್ಮದ್ ತಹಿರ್ ರೈ, ಐಎಸ್ ಐ ಎಲ್ಪಿನೆಂಟ್ ಕರ್ನಲ್ ತನ್ವಿರ್ ಅಹಮ್ಮದ್ ಅವರು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ, ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಎನ್ ಐಎ ಮೂಲಗಳು ತಿಳಿಸಿವೆ. 
ಪಂಜಾಬ್ ನ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಸಲ್ವಿಂದ್ ಸಿಂಗ್, ಅಡುಗೆ ಸಹಾಯಕ ಮದನ್ ಗೋಪಾಲ್ ಮತ್ತು ಸಿಂಗ್ ಸ್ನೇಹಿತ ರಾಜೇಶ್‌ ವರ್ಮಾ ಸೇರಿದಂತೆ 16 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದಾರೆ. 
ಈ ಮೂವರನ್ನು ಪಠಾಣ್ ದಾಳಿಯ ಹೊಣೆ ಹೊತ್ತಿರುವ ಪಾಕಿಸ್ತಾನ ಮೂಲದ ಜೈಸ್ ಇ ಮೊಹಮ್ಮದ್ ಉಗ್ರ ಸಂಘಟನೆ ಅಪಹರಣ ಮಾಡಿ, ಬಿಡುಗಡೆಗೊಳಿಸಿತ್ತು. ಉಗ್ರರು ಸಿಂಗ್ ಅಪಹರಣ ಮಾಡುವಾಗ ಮದನ್ ಗೋಪಾಲ್ ಮತ್ತು ರಾಜೇಶ್ ಶರ್ಮಾ ಅವರು ಜೊತೆಗಿದ್ದರು.
SCROLL FOR NEXT