ಲಾಡನ್ ಹತ್ಯೆ ನಂತರ ಸಿಐಎ ಮಾಜಿ ಅಧಿಕಾರಿಗೆ ವಿಷಪ್ರಾಶನ ಮಾಡಿಸಿದ್ದ ಪಾಕ್ ನ ಐಎಸ್ಐ! 
ವಿದೇಶ

ಲಾಡನ್ ಹತ್ಯೆ ನಂತರ ಸಿಐಎ ಮಾಜಿ ಅಧಿಕಾರಿಗೆ ವಿಷಪ್ರಾಶನ ಮಾಡಿಸಿದ್ದ ಪಾಕ್ ನ ಐಎಸ್ಐ!

ಅಲ್ ಖೈದಾ ಉಗ್ರ ಸಂಘಟನೆ ಮುಖಂಡ ಒಸಾಮಾ ಬಿನ್ ಲಾಡನ್ ಹತ್ಯೆ ನಂತರ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಪಾಕಿಸ್ತಾನದಲ್ಲಿದ್ದ ಅಮೆರಿಕದ ಸಿಐಎ ಮಾಜಿ ಅಧಿಕಾರಿಗೆ ವಿಷಪ್ರಾಶನ ಮಾಡಿಸಿತ್ತು

ವಾಷಿಂಗ್ ಟನ್: ಅಲ್ ಖೈದಾ ಉಗ್ರ ಸಂಘಟನೆ ಮುಖಂಡ ಒಸಾಮಾ ಬಿನ್ ಲಾಡನ್ ಹತ್ಯೆ ನಂತರ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಪಾಕಿಸ್ತಾನದಲ್ಲಿದ್ದ ಅಮೆರಿಕದ ಸಿಐಎ ಮಾಜಿ ಅಧಿಕಾರಿಗೆ ವಿಷಪ್ರಾಶನ ಮಾಡಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಪಾಕಿಸ್ಥಾನದಲ್ಲಿನ ಸಿಐಎ ಕೇಂದ್ರದ ಮಾಜಿ ಮುಖ್ಯಸ್ಥ ಮಾರ್ಕ್‌ ಕೆಲ್ ಟ್ರನ್‌ ಅಬೋಟಾಬಾದ್‌ನಲ್ಲಿದ್ದ  ಒಸಾಮಾ ಬಿನ್‌ ಲಾಡೆನ್‌ನ ಅಡಗುದಾಣದ ಮೇಲೆ ದಾಳಿ ನಡೆಸಲು ಅಮೆರಿಕ ತಂಡದ ರಹಸ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾರ್ಕ್ ಕೆಲ್ ಟ್ರನ್ ಅವರ ಮೇಲೆ ದ್ವೇಷ ಹೊಂದಿದ್ದ ಪಾಕಿಸ್ತಾನದ ಐಎಸ್ಐ ಅವರಿಗೆ ವಿಷ ಪ್ರಾಶನ ಮಾಡಿಸಿರುವ ಸಾಧ್ಯತೆ ಇದೆ ಎಂದು ವಾಷಿಂಗ್ ಟನ್ ಪೋಸ್ಟ್ ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಯುಎಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಲಾಡನ್ ಹತ್ಯೆಯಾದ 2 ತಿಂಗಳಲ್ಲಿ ಮಾರ್ಕ್ ಕೆಲ್ ಟ್ರನ್ ಗೆ ತೀವ್ರ ಅನಾರೋಗ್ಯ ಕಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಅಮೆರಿಕಾಗೆ ವಾಪಸ್ ಕರೆಸಿಕೊಂಡು, ಕೂಲಂಕುಶ ಆರೋಗ್ಯ ತಪಾಸಣೆ ನಂತರ ಜಠರ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ಬಗ್ಗೆ ವಿಸ್ತೃತ ಮಾಹಿತಿ ಪ್ರಕಟಿಸಿರುವ ವಾಷಿಂಗ್ ಟನ್ ಪೋಸ್ಟ್, ಲಾಡನ್ ಹತ್ಯೆ ನಂತರ ಕೆಲ್‌ಟ್ರನ್‌ ಅವರಿಗೆ ತೀವ್ರವಾದ ಅನಾರೋಗ್ಯ ಉಂಟಾಗಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ವಿಷ ಪ್ರಾಶನ ಮಾಡಿಸಿರುವುದೇ ಕಾರಣವಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಲಾಡನ್ ಹತ್ಯೆ ಮಾತ್ರವಲ್ಲದೇ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಅಮೆರಿಕ ಐಎಸ್ಎಸ್ ಹಾಗೂ ಅದರ ಮುಖ್ಯಸ್ಥರನ್ನು ಸಿಲುಕಿಸಿದ್ದರ ಸೇಡು ತೀರಿಸಿಕೊಳ್ಳಲೂ ಪಾಕಿಸ್ತಾನ ಯುಎಸ್ ನ ಸಿಐಎ ಅಧಿಕಾರಿಗೆ ವಿಷ ಪ್ರಾಶನ ಮಾಡಿಸಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಮೇಲ್ನೋಟಕ್ಕೆ ವಿಷಪ್ರಾಶನವಾಗಿತ್ತು ಎನ್ನಲಾಗಿದ್ದರೂ ಪಾಕ್ ಅಧಿಕಾರಿಗಳಿಂದಲೇ ಕೆಲ್ಟನ್‌ಗೆ ವಿಶಪ್ರಾಶನವಾಗಿತ್ತು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಸಿಐಎ ವಕ್ತಾರರು ಹೇಳಿರುವುದನ್ನು ವಾಷಿಂಗ್ ಟನ್ ಪೋಸ್ಟ್ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್

"ಜನ ನಾಯಗನ್ ಬಜೆಟ್': ಮಹಿಳೆಯರು, ಯುವಜನತೆಗೆ ದಳಪತಿ ವಿಜಯ್ ಬಂಪರ್ ಗಿಫ್ಟ್; ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ