ಸಾಂದರ್ಭಿಕ ಚಿತ್ರ 
ವಿದೇಶ

ಉತ್ತರ ಕೊರಿಯಾದಲ್ಲಿ ಬಿಬಿಸಿ ವರದಿಗಾರ ವಶಕ್ಕೆ; ದೇಶದಿಂದ ಉಚ್ಛಾಟನೆ

ಉತ್ತರ ಕೊರಿಯಾದಲ್ಲಿ ಬಿಬಿಸಿ ಬಾತ್ಮೀದಾರ ರುಪೆರ್ಟ್ ವಿಂಗ್ಫೀಲ್ಡ್-ಹಯೇಸ್ ಅವರನ್ನು ಅವರ ವರದಿಯಿಂದಾಗಿ ವಶಕ್ಕೆ ಪಡೆಯಲಾಗಿದ್ದು, ದೇಶದಿಂದ ಉಚ್ಛಾಟನೆ ಮಾಡಲಾಗುತ್ತದೆ

ಲಂಡನ್: ಉತ್ತರ ಕೊರಿಯಾದಲ್ಲಿ ಬಿಬಿಸಿ ಬಾತ್ಮೀದಾರ ರುಪೆರ್ಟ್ ವಿಂಗ್ಫೀಲ್ಡ್-ಹಯೇಸ್ ಅವರನ್ನು ಅವರ ವರದಿಯಿಂದಾಗಿ ವಶಕ್ಕೆ ಪಡೆಯಲಾಗಿದ್ದು, ದೇಶದಿಂದ ಉಚ್ಛಾಟನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಉತ್ತರ ಕೊರಿಯಾ ದೇಶವನ್ನು ಬಿಡುವುದಕ್ಕೂ ಮುಂಚಿತವಾಗಿ, ಬಿಬಿಸಿ ಕಾರ್ಯಕ್ರಮ ನಿರ್ಮಾಪಕ ಮೇರಿ ಬೈರನ್, ಛಾಯಾಚಿತ್ರಕಾರ ಮ್ಯಾಥ್ಯೂ ಗೊಡಾರ್ಡ್ ಅವರನ್ನು ಕೂಡ ಶುಕ್ರವಾರ ವಶಕ್ಕೆ ಪಡೆಯಲಾಗಿದೆ.

ಇವರುಗಳನ್ನು ಉತ್ತರ ಕೊರಿಯಾ ಅಧಿಕಾರಿಗಳು ೮ ಘಂಟೆಗಳ ಕಾಲ ಪ್ರಶ್ನಿಸಿದ್ದು, ಹೇಳಿಕೆಗೆ ಸಹಿ ಮಾಡಿಸಿಕೊಳ್ಳಲಾಗಿದೆ.

ವರ್ಕರ್ ಪಕ್ಷದ ಸಮಾವೇಶಕ್ಕೂ ಮುಂಚಿತವಾಗಿ ಸಂಶೋಧನಾ ಪ್ರವಾಸಕ್ಕೆಂದು ಕೆಲವು ನೊಬೆಲ್ ಪ್ರಶಸ್ತಿ ಸ್ವೀಕರಿಸಿರುವ ಗಣ್ಯರೊಂದಿಗೆ ಬಿಬಿಸಿ ತಂಡ ಉತ್ತರ ಕೊರಿಯಾಗೆ ಬಂದಿತ್ತು. ಉತ್ತರ ಕೊರಿಯಾದ ರಾಜಧಾನಿಯಲ್ಲಿನ ಜನ ಜೀವನದ ಬಗೆಗಿನ ವರದಿಂಯಿಂದಾಗಿ ಆ ದೇಶದ ನಾಯಕತ್ವ ಬೇಸರಗೊಂಡಿತ್ತು.

ಪ್ಯೋಂಗ್ಯಾಂಗ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಉತ್ತರ ಕೊರಿಯಾ ಶಾಂತಿ ಪಡೆ, ದೇಶದ ವ್ಯವಸ್ಥೆಯನ್ನು ವಿರೋಧಿಸಿ, ವಸ್ತು ನಿಷ್ಠ ವರದಿ ಮಾಡದೆ ಇದ್ದುದಕ್ಕೆ ಈ ಕ್ರಮ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದೆ.

ಈ ವರದಿಗಾರರು ಉತ್ತರ ಕೊರಿಯಾವನ್ನು ಪ್ರವೇಶಿಸುವುದರಿಂದ ನಿಷೇಧಿಸಲಾಗುವುದು ಎಂದು ಕೂಡ ಶಾಂತಿ ಪಡೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ