ಎರಡು ಬಾರಿ ಬೃಹತ್ ಮೊತ್ತದ ಲಾಟರಿ ಗೆದ್ದ ನ್ಯೂಯಾರ್ಕ್ ನ ಕಾರ್ಮಿಕ! 
ವಿದೇಶ

ಎರಡು ಬಾರಿ ಬೃಹತ್ ಮೊತ್ತದ ಲಾಟರಿ ಗೆದ್ದ ನ್ಯೂಯಾರ್ಕ್ ನ ಕಾರ್ಮಿಕ!

ಅದೃಷ್ಟ ಅಂದ್ರೆ ಹೀಗಿರಬೇಕು ನೋಡಿ. ಒಂದು ಬಾರಿ ಲಾಟರಿ ಬಂದರೆ ಅದೃಷ್ಟಎನ್ನುತ್ತೇವ, ಅದೇ ಎರಡೆರಡು ಬಾರಿ ಬಂದರೆ?

ಪಶ್ಚಿಮ ಬ್ಯಾಬಿಲೋನ್: ಅದೃಷ್ಟ ಅಂದ್ರೆ ಹೀಗಿರಬೇಕು ನೋಡಿ. ಒಂದು ಬಾರಿ ಲಾಟರಿ ಬಂದರೆ ಅದೃಷ್ಟಎನ್ನುತ್ತೇವ, ಅದೇ ಎರಡೆರಡು ಬಾರಿ ಬಂದರೆ? ಪಶ್ಚಿಮ ಬ್ಯಾಬಿಲೋನ್ ನಲ್ಲಿ ಓರ್ವ ಕಾರ್ಮಿಕನಿಗೆ ಎರಡು ಬಾರಿ ಬೃಹತ್ ಮೊತ್ತದ ಲಾಟರಿ ಹೊಡೆದಿದೆ.
ಕಟ್ಟಡ ನಿರ್ಮಾಣ ಕಾರ್ಮಿಕರಾಗಿರುವ ಬ್ರೂಸ್ ಮ್ಯಾಗಿಸ್ಟ್ರೋ ವಿನ್ ಫಾರ್ ಲೈಫ್ ಎಂಬ ಆಟದಲ್ಲಿ ಒಂದು ಮಿಲಿಯನ್ ಡಾಲರ್ ಲಾಟರಿ ಗೆದ್ದಿದ್ದಾರೆ. ಇದೇ ವ್ಯಕ್ತಿ 2012 ರಲ್ಲಿಯೂ ಸಹ 1 ಮಿಲಿಯನ್ ಡಾಲರ್ ಲಾಟರಿ ಗೆದ್ದಿದ್ದರು. ಎರಡೆರಡು ಬಾರಿ ಲಾಟರಿ ಗೆದ್ದ ಮಾತ್ರಕ್ಕೆ ಇವರನ್ನು ಅದೃಷ್ಟವಂತ ಎಂದುಕೊಳ್ಳಬೇಡಿ. ಮೊದಲ ಬಾರಿ ಲಾಟರಿ ಗೆದ್ದ ಬಹುತೇಕ ಹಣ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ಖರ್ಚಾಗಿದೆ. ಆದರೆ ಪತ್ನಿಯನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಎರಡನೇ ಬಾರಿ ಲಾಟರಿ ಗೆದ್ದಿರುವ ಬಗ್ಗೆ ಮಾತನಾಡಿರುವ ಮ್ಯಾಗಿಸ್ಟ್ರೋ ಅವರ ಮಗ, ಇದು ತನ್ನ ತಾಯಿಯೇ ತನ್ನ ತಂದೆಗೆ ಕಳಿಸಿಕೊಟ್ಟಿರುವ ಉಡುಗೊರೆ ಎಂದು ಹೇಳಿದ್ದಾನೆ. ಬ್ರೂಸ್ ಮ್ಯಾಗಿಸ್ಟ್ರೋ 2012 ರಲ್ಲಿ ಲಾಟರಿ ಗೆದ್ದಿದ್ದ ಗ್ಯಾಸ್ ಸ್ಟೇಷನ್ ನಲ್ಲೇ ಈ ಬಾರಿಯೂ ಲಾಟರಿ ಗೆದ್ದಿರುವುದು ಮತ್ತೊಂದು ಅಚ್ಚರಿ.
ಪ್ರತಿದಿನವೂ 20 ಡಾಲರ್ ನ್ನು ನೀಡಿ ಲಾಟರಿ ಖರೀದಿಸುತ್ತಿದ್ದೆ ಹಾಗೆಯೇ ಏ.11 ರಂದು ವಿನ್ ಫಾರ್ ಲೈಫ್ ನ ಆಟದಲ್ಲಿ 10 ಟಿಕೆಟ್ ಪಡೆದೆ ಎಂದು ಮ್ಯಾಗಿಸ್ಟ್ರೋ ಹೇಳಿದ್ದಾರೆ. ಒಂದು ಮಿಲಿಯನ್ ಡಾಲರ್ ಲಾಟರಿಯ ಹಣದಲ್ಲಿ ಬಾಕಿ ನೀಡಬೇಕಿರುವ ಹಣವನ್ನು ನೀಡಿ, ಉಳಿದಿದ್ದನ್ನು ತನ್ನ ಗೆಳತಿ ಹಾಗೂ ಮೂವರು ಮಕ್ಕಳಿಗೆ ಹಂಚುವುದಾಗಿ ಮ್ಯಾಗಿಸ್ಟ್ರೋ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!