ವಿದೇಶ

ಇಸ್ಲಾಂ ನಿಂದನೆ ಆರೋಪ: ಬಾಂಗ್ಲಾದಲ್ಲಿ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ

Srinivas Rao BV

ಢಾಕಾ: ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಸ್ಥಳೀಯರ ಗುಂಪು ಶಿಕ್ಷೆ ನೀಡಿರುವ ಮತ್ತೊಂದು ಘಟನೆ ವರದಿಯಾಗಿದೆ.

ಇಸ್ಲಾಂ ನ್ನು ಅವಹೇಳನ ಮಾಡಿದ್ದಕ್ಕಾಗಿ ಶಾಲೆಯೊಂದರ ಮುಖ್ಯಶಿಕ್ಷಕರನ್ನು ಶಿಕ್ಷಿಸಲಾಗಿರುವ ಘಟನೆ ಬಾಂಗ್ಲಾದ ನಾರಾಯಣ್ ಗಂಜ್ ನಲ್ಲಿ ನಡೆದಿದೆ. ಡೈಲಿ ಸ್ಟಾರ್ ನ್ಯೂಸ್ ಪೇಪರ್ ನ ವರದಿ ಪ್ರಕಾರ ಪಿಯರ್ ಸತ್ತಾರ್ ಲತೀಫ್ ಶಾಲೆಯ ಮುಖ್ಯಶಿಕ್ಷಕರಾಗಿರುವ ಶ್ಯಾಮಲ್ ಕಾಂತಿ ಭಕ್ತ ಅವರ ವಿರುದ್ಧ ಇಸ್ಲಾಂ ಬಗ್ಗೆ ಅವಹೇಳನ ಮಾಡಿರುವ ಆರೋಪ ಕೇಳಿಬಂದಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳಿಯರ ಗುಂಪು ಹಲ್ಲೆ ನಡೆಸಿದೆ. ಆದರೆ ಮುಖ್ಯಶಿಕ್ಷಕರ ವಿರುದ್ಧ ಕೇಳಿಬಂದಿದ್ದ ಆರೋಪ ಸುಳ್ಳು ಎಂದು ತಿಳಿದುಬಂದಿದ್ದು, ಪೊಲೀಸರು ಆಕ್ರೋಶಭರಿತರ ಗುಂಪಿನಿಂದ ಶ್ಯಾಮಲ್ ಕಾಂತಿ ಭಕ್ತ ಅವರನ್ನು ರಕ್ಷಿಸಿದ್ದಾರೆ.

ಹಲ್ಲೆಗೊಳಗಾಗಿದ್ದ ಮುಖ್ಯಶಿಕ್ಷಕರನ್ನು ಬಚಾವ್ ಮಾಡಬೇಕಾದರೆ ಶಿಕ್ಷೆ ಕೊಡಿಸುವುದೊಂದೇ ಇದ್ದ ಮಾರ್ಗವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಕಿವಿ ಹಿಡಿದು ಬಸ್ಕಿ ಹೊಡೆಯುವಂತೆ ಸೂಚಿಸಲಾಗಿದೆ. ಶ್ಯಾಮಲ್ ಕಾಂತಿ ಭಕ್ತ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಅಲ್ಲಿನ ಪತ್ರಿಕಾ ವರದಿಗಳ ಮೂಲಕ ತಿಳಿದುಬಂದಿದೆ. 

SCROLL FOR NEXT