ಡಮಾಸ್ಕಸ್: ಸಿರಿಯಾದ ಡೈಯರ್ ಅಲ್ ಝೋರ್ ಪ್ರಾಂತ್ಯದಲ್ಲಿ ಇಸೀಸ್ ಕಪಿಮುಷ್ಠಿಯಲ್ಲಿದ್ದ ಆಸ್ಪತ್ರೆಯನ್ನು ಸಿರಿಯಾ ಸೇನೆ ವಾಪಸ್ ಪಡೆದಿದೆ.
ಆಸ್ಪತ್ರೆಯನ್ನು ವಶಪಡಿಸಿಕೊಂಡಿದ್ದ ಇಸೀಸ್ ಉಗ್ರ ಸಂಘಟನೆ ಅಲ್ಲಿದ್ದ ವೈದ್ಯರು ಹಾಗೂ ನರ್ಸ್ ಗಳನ್ನು ಒತ್ತೆಯಾಳುಗಳನ್ನಾಗಿರಿಸಿಕೊಂದಿದ್ದರು. ಮೇ.14 ರಂದು ಇಸೀಸ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಸಿರಿಯಾ ಸೇನೆ, ಆಸ್ಪತ್ರೆಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಅಲ್ಲಿನ ಮಾನವ ಹಕ್ಕುಗಳ ವೀಕ್ಷಕರು ತಿಳಿಸಿದ್ದಾರೆ.
ಇಸೀಸ್ ವಿರುದ್ಧ ಸಿರಿಯಾದ ಸೇನೆ ನಡೆಸಿದ ದಾಳಿಯಲ್ಲಿ ಸಿರಿಯಾ ಸೇನೆಯ 29 ಯೋಧರು ಸಾವನ್ನಪ್ಪಿದ್ದಾರೆ.