ಚೀನಾದ ದೂರಗಾಮಿ ಕ್ಷಿಪಣಿ "ಗ್ವಾಮ್ ಕಿಲ್ಲರ್" (ಸಂಗ್ರಹ ಚಿತ್ರ) 
ವಿದೇಶ

ಅಮೆರಿಕದ ಆತಂಕಕ್ಕೆ ಕಾರಣವಾದ ಚೀನಾದ ಕ್ಷಿಪಣಿ!

ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕದ್ದಿದೆ.

ವಾಷಿಂಗ್ಟನ್: ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕದ್ದಿದೆ.

ಚೀನಾ ನೂತನವಾಗಿ ಅಭೀವೃದ್ಧಿ ಪಡಿಸಿರುವ 5,500 ಕಿ.ಮೀ. ದೂರ ತಲುಪುವ ಸಾಮರ್ಥ್ಯವಿರುವ ಗ್ವಾಮ್ ಕಿಲ್ಲರ್ ಎಂಬ ಕ್ಷಿಪಣಿ ಯಿ೦ದ ಅಮೆರಿಕಕ್ಕೆ ಭದ್ರತಾ ಆತ೦ಕ ಎದುರಾಗಿದೆ ಎ೦ದು  ಅಲ್ಲಿನ ಸಮಿತಿ ವರದಿ ಮಾಡಿದೆ. ಗ್ವಾಮ್ ಎ೦ಬುದು ಅಮೆರಿಕ ವ್ಯಾಪ್ತಿಗೆ ಒಳಪಟ್ಟಿರುವ ದ್ವೀಪವಾಗಿದ್ದು, ಅಮೆರಿಕದ ಪ್ರಮುಖ ಸೇನಾನೆಲೆಗಳಾದ ಆ್ಯ೦ಡಸ೯ನ್ ವಾಯುನೆಲೆ, ನೌಕಾನೆಲೆ ಇದೇ  ದ್ವೀಪದಲ್ಲಿದೆ. ಚೀನಾ, ಉತ್ತರ ಕೊರಿಯಾ ದೇಶಗಳಿಂದ ಸಂಭವಿಸಬಹುದಾದ ಸ೦ಭಾವ್ಯ ದಾಳಿಯಿ೦ದ ರಕ್ಷಣಾ ನೆಲೆಗಳನ್ನು ದೂರವಿರಿಸುವ ಉದ್ದೇಶದಿ೦ದ ಅಮೆರಿಕ ದೂರದ ಗ್ವಾಮ್  ದ್ವೀಪದಲ್ಲಿ ತನ್ನ ಸೇನಾನೆಲೆ ಸ್ಥಾಪಿಸಿತ್ತು.

ಈ ಗ್ವಾಮ್ ದ್ವೀಪ ಚೀನಾದಿ೦ದ ಸುಮಾರು 4 ಸಾವಿರ ಕಿ.ಮೀ. ದೂರದಲ್ಲಿದ್ದು, ಇದೇ ಕಾರಣಕ್ಕೆ ಅಮೆರಿಕ ಗ್ವಾಮ್ ದ್ವೀಪದಲ್ಲಿ ತನ್ನ ಸೇನಾ ನೆಲೆ ಸ್ಥಾಪಿಸಿತ್ತು. ಇದೀಗ ಈ ಚೀನಾ ಅಭಿವೃದ್ಧಿ  ಪಡಿಸಿರುವ ಡಿಎಫ್ -26 ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ಮಾದರಿಯ "ಗ್ವಾಮ್ ಕಿಲ್ಲರ್" ಎಂಬ ಕ್ಷಿಪಣಿ ಈ ಭದ್ರ ನೆಲೆಯನ್ನೂ ತಲುಪುವ ಸಾಮರ್ಥ್ಯ ಹೊಂದಿದ್ದು, ಇದೇ ವಿಚಾರ  ಇದೀಗ ಅಮೆರಿಕದ ತಲೆನೋವಿಗೆ ಕಾರಣವಾಗಿದೆ.

ಆದರೆ ಇದರಿಂದ ಕೈ ಕಟ್ಟಿ ಕೂರದ ಅಮೆರಿಕ ಚೀನಾದ ಗ್ವಾಮ್ ಕಿಲ್ಲರ್ ಕ್ಷಿಪಣಿಯನ್ನು ಆಕಾಶ ಮಾರ್ಗದಲ್ಲಿಯೇ ಛಿದ್ರಗೊಳಿಸಬಲ್ಲ ಕ್ಷಿಪಣಿ ನಿರೋಧಕ ಮಿಸೈಲ್ ಗಳನ್ನು ಇದೀಗ ಗ್ವಾಮ್ ದ್ವೀಪಕ್ಕೆ  ರವಾನೆ ಮಾಡಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ರಕ್ಷಣಾ ವಿಚಾರದಲ್ಲಿ ಚೀನಾ ಮತ್ತು ಅಮೆರಿಕ ದೇಶಗಳ ಪೈಪೋಟಿಗಿಳಿದಿದ್ದು, ಚೀನಾಗೆ ಪ್ರತ್ಯುತ್ತರ ನೀಡಿಲು ಇದೀಗ ಅಮೆರಿಕ ಸಜ್ಜಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT