ವಿದೇಶ

ಹವಾಮಾನ ವರದಿ ನಿರೂಪಕಿಯ ಕನಿಷ್ಠ ಬಟ್ಟೆ; ಲೈವ್ ಕಾರ್ಯಕ್ರಮದಲ್ಲಿಯೇ ಕೋಟ್ ತೊಡಿಸಿದ ವೀಕ್ಷಕರು!

Sumana Upadhyaya

ಲಾಸ್‌ ಏಂಜಲಿಸ್‌: ಟಿವಿ ನಿರೂಪಕರು ಉತ್ತಮವಾಗಿ ಅಥವಾ ಕೆಟ್ಟದಾಗಿ ಉಡುಪು ಧರಿಸಿಕೊಂಡರೆ ಅದಕ್ಕೆ ವೀಕ್ಷಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾರೆ. ಕೆಟ್ಟದಾಗಿ ಉಡುಗೆ ತೊಟ್ಟುಕೊಂಡರೆ ಬೈಯುತ್ತಾರೆ. ಅದು ಭಾರತೀಯ ಸಂಸ್ಕೃತಿ ಎಂದು ನಾವಂದುಕೊಳ್ಳುತ್ತೇವೆ.

ಆದರೆ ಉಡುಗೆ-ತೊಡುಗೆಯಲ್ಲಿ ಧಾರಾಳತೆ ತೋರುವ ಪಾಶ್ಚಾತ್ಯ ದೇಶದಲ್ಲಿ ಅದರಲ್ಲೂ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಟಿವಿ ನಿರೂಪಕಿ ತೊಟ್ಟ ಬಟ್ಟೆಗೆ ಬೈದು ಆಕೆ ಕೋಟ್ ಧರಿಸುವಂತೆ ಮಾಡಿದ ಘಟನೆ ನಡೆದಿದೆ.

 ಟಿವಿಯಲ್ಲಿ ಹವಾಮಾನ ವರದಿಯನ್ನು ಓದುವಾಕೆ ಕನಿಷ್ಠ ಉಡುಗೆಯಲ್ಲಿ ಟಿವಿಯಲ್ಲಿ ಕಾಣಿಸಿಕೊಂಡು ಹವಾಮಾನ ವರದಿಯನ್ನು ಮಂಡಿಸಲು ಮುಂದಾದಾಗ ಆ ಟಿವಿ ವಾಹಿನಿಯ ವೀಕ್ಷಕರು ಸಂದೇಶಗಳ ಸುರಿಮಳೆಗೈಯತೊಡಗಿದರು.ಹವಾಮಾನ ವರದಿ ಓದುವಾಗ ಕನಿಷ್ಠ ಬಟ್ಟೆ ತೊಡುವುದು ಏಕೆ? ನಿಮ್ಮ ಬಟ್ಟೆಯನ್ನು ಬದಲಾಯಿಸಿಕೊಳ್ಳಿ ಎಂದು ತಾಕೀತು ಮಾಡಿದರು. ಅದೂ ಲೈವ್ ಕಾರ್ಯಕ್ರಮದಲ್ಲಿ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದರಿಂದ ಟಿವಿ ಆಂಕರ್ ಗೆ ಮತ್ತು ವಾಹಿನಿಯವರಿಗೆ ಮುಜುಗರವುಂಟಾಗಿ ಅಲ್ಲೇ ಕೋಟ್ ತೊಟ್ಟುಕೊಂಡ ಪ್ರಸಂಗ ನಡೆಯಿತು. ಆದರೆ ಈ ರೀತಿ  ಲೈವ್‌ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯನ್ನು  ಅವಮಾನಿಸಿದ್ದು ಎಷ್ಟು  ಸರಿ ಎಂಬ ಮಾತೂ ಕೇಳಿಬಂದಿದೆ.

SCROLL FOR NEXT