ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ 8ರಷ್ಟು ತೀವ್ರತೆಯಲ್ಲಿ ಪ್ರಬಲ ಭೂಕಂಪವಾಗುವ ಸಾಧ್ಯತೆ ಇದ್ದು, ಮಿಲಿಯನ್ ನಷ್ಟು ಜನರು ಅಪಾಯಕ್ಕೊಳಗಾಗುವ ಸ್ಥಿತಿ ಎದುರಾಗಬಹುದು ಎಂದು ಭೌಗೋಳಿಕ ತಜ್ಞರು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಸಂಭವಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಹೆಚ್ಚು ಭೂಕಂಪನ ಸಂಭವಿಸಿಲ್ಲ. ಲಘು ಭೂಕಂಪನವೂ ಆಗಿಲ್ಲ. ಹಾಗಾಗಿ, ಪ್ರಬಲ ಭೂಕಂಪನವಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
2005ರಲ್ಲಿ ಪಾಕಿಸ್ತಾನ ವಶಪಡಿಸಿಕೊಂಡಿರುವ ಕಾಶ್ಮೀರದ ಬಾಲಕೋಟ್ -ಬಾಗ್ ನಲ್ಲಿ ರಿಕ್ಟರ್ ಮಾಪಕದಲ್ಲಿ 7.6ರ ತೀವ್ರತೆಯಲ್ಲಿ ಭೂಕಂಪನವಾಗಿತ್ತು.