ವಾಷಿಂಗ್ಟನ್: ಭಾರತದ ಜಿಹಾದಿಗಳು ಎಂದು ಹೇಳಲಾಗುವ ಉಗ್ರರು ಸಿರಿಯಾದಲ್ಲಿ ದಾಳಿ ನಡೆಸುತ್ತಿರುವ ವೀಡಿಯೋವನ್ನು ಇಸ್ಲಾಮಿಕ್ ಸ್ಟೇಟ್ (ಇಸಿಸ್) ಬಹಿರಂಗ ಪಡಿಸಿದೆ. ಈ ವೀಡಿಯೋದಲ್ಲಿ ಇಸಿಸ್ ಪತಾಕೆಯೊಂದಿಗೆ ಪುಟ್ಟ ಬೋಟ್ಗಳಲ್ಲಿ ಕಲಾಶ್ನಿಕೋವ್ ಬಂದೂಕನ್ನು ಝಳಪಿಸುವ, ಹೋಮ್ಸ್ ಪ್ರಾಂತ್ಯದಲ್ಲಿ ಸಿರಿಯಾ ಪಡೆಗಳ ವಿರುದ್ದ ಭಾರತೀಯ ಜಿಹಾದಿಗಳು ಹೋರಾಡುತ್ತಿರುವುದನ್ನು ತೋರಿಸಲಾಗಿದೆ.
ಭಾರತದಿಂದ ಜಿಹಾದಿಗಳನ್ನು ತಮ್ಮತ್ತ ಸೆಳೆದು ತಮ್ಮ ಗುಂಪಿನಲ್ಲಿ ನೇಮಕ ಮಾಡುವ ಗುರಿಯೊಂದಿಗೆ ಇಸಿಸ್ ಈ ವೀಡಿಯೋ ಬಿಡುಗಡೆ ಮಾಡಲಾಗಿದೆ ಹೇಳಲಾಗುತ್ತಿದೆ.
ಆದಾಗ್ಯೂ, ಇದರಲ್ಲಿ ಎಷ್ಟು ಭಾರತೀಯರಿದ್ದಾರೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.
ಭಾರತವನ್ನು ತೊರೆದು ಸಿರಿಯಾದಲ್ಲಿ 'ಕಾಫರ'ರ (ಅವಿಶ್ವಾಸಿ) ವಿರುದ್ಧ ಹೋರಾಟ ಮಾಡಲು ಜಿಹಾದ್ ಯುದ್ಧಕ್ಕೆ ಸೇರುವಂತೆ ಇಸಿಸ್ ಭಾರತೀಯರಿಗೆ ಕರೆ ನೀಡಿದ್ದಾರೆಂದು ವೀಡಿಯೋ ಬಗ್ಗೆ ಉಲ್ಲೇಖಿಸಿ ಅಲ್ ಮಸ್ದಾರ್ ನ್ಯೂಸ್ ವರದಿ ಮಾಡಿದೆ.