ನವದೆಹಲಿ: ಕಾಂಗೋ ಪ್ರಜೆಯ ಹತ್ಯೆ ಜನಾಂಗೀಯ ದಾಳಿಯಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟ ಪಡಿಸಿದ್ದಾರೆ.
ಮಂಗಳವಾರ ಆಫ್ರಿಕಾದ ರಾಯಭಾರಿ ಮತ್ತು ಇತರೆ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ಅವರು, ಆಫ್ರಿಕಾ ಪ್ರಜೆಗಳಿಗೆ ಭಾರತದಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಕಾಂಗೋ ಪ್ರಜೆಯ ಹತ್ಯೆ ಜನಾಂಗೀಯ ದಾಳಿಯಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ.
ಆಫ್ರಿಕಾ ದೇಶಗಳ ಪ್ರಜೆಗಳು ಜನಾಂಗೀಯ ದ್ವೇಷಕ್ಕೆ ಗುರಿಯಾಗುತ್ತಿದ್ದಾರೆ ಎಂದು ಆಪ್ರಿಕಾ ದೇಶಗಳ ರಾಯಭಾರಿಗಳು ಆರೋಪಿಸಿದ್ದವು. ಅಲ್ಲದೇ ಈ ಸಂಬಂಧ ದೆಹಲಿಯಲ್ಲಿ ಆಫ್ರಿಕಾ ಪ್ರಜೆಗಳು ಪ್ರತಿಭಟನೆ ಕೈಗೊಂಡಿದ್ದರು.
ಆಫ್ರಿಕಾ ಪ್ರಜೆಗಳ ಸುರಕ್ಷತೆಗೆ ಭಾರತ ಬದ್ಧವಾಗಿದೆ. ಕಾಂಗೋ ಪ್ರಜೆಯ ಹತ್ಯೆ ಕುರಿತು ತನಿಖೆಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ನವದೆಹಲಿಯಲ್ಲಿ ವಸಂತ್ ಕುಂಜ್ ನಲ್ಲಿ ಎರಡು ವಾರಗಳ ಹಿಂದೆ ಕಾಂಗೊ ದೇಶದ ಪ್ರಜೆ ಮಸೊಂದಾ ಕೆಟಾಡ ಅಲಿವರ್ ಎಂಬವರ ಹತ್ಯೆ ನಡೆದಿತ್ತು. ಪ್ರಕರಣ ಸಂಬಂಧ ಮಂಗಳವಾರ ಮತ್ತೆ ಮೂವರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics