ಟ್ರಂಪ್ ವಿರುದ್ಧ ರ್ಯಾಲಿ: ಗುಂಡಿನ ದಾಳಿ ವೇಳೆ ಹಲವರಿಗೆ ಗಾಯ 
ವಿದೇಶ

ಟ್ರಂಪ್ ವಿರುದ್ಧ ರ್ಯಾಲಿ: ಗುಂಡಿನ ದಾಳಿ ವೇಳೆ ಹಲವರಿಗೆ ಗಾಯ

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹಲವು ವಿರೋಧಗಳು ವ್ಯಕ್ತವಾಗುತ್ತಿದ್ದು, ಟ್ರಂಪ್ ವಿರುದ್ಧ ನಡೆಯಲಾದ ರ್ಯಾಲಿ ವೇಳೆ ಗುಂಡಿನ ದಾಳಿ ನಡೆದು ಹಲವರಿಗೆ ಗಾಯವಾಗಿರುವ ಘಟನೆ ಬುಧವಾರ ತಡರಾತ್ರಿ...

ಸೀಟಲ್: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹಲವು ವಿರೋಧಗಳು ವ್ಯಕ್ತವಾಗುತ್ತಿದ್ದು, ಟ್ರಂಪ್ ವಿರುದ್ಧ ನಡೆಯಲಾದ ರ್ಯಾಲಿ ವೇಳೆ ಗುಂಡಿನ ದಾಳಿ ನಡೆದು ಹಲವರಿಗೆ ಗಾಯವಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ನಿನ್ನೆ ನಡೆದ ಮತಎಣಿಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಟ್ರಂಪ್ ಅವರು 276 ಮತಗಳೊಂದಿಗೆ ಜಯಭೇರಿ ಸಾಧಿಸಿ ಅಮೆರಿಕ ಅಧ್ಯಕ್ಷ ಪಟ್ಟವನ್ನು ಸಾಧಿಸಿದ್ದರು.

ಈ ಹಿನ್ನೆಲೆಯಲ್ಲಿ ಟ್ರಂಪ್ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿದ್ದವು. ಇದರಂತೆ ಕಳೆದ ರಾತ್ರಿ ಟ್ರಂಪ್ ವಿರುದ್ಧ ಕೆಲವರು ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದಾರೆ, ರ್ಯಾಲಿ ವೇಳೆ ಗುಂಡಿನ ದಾಳಿ ನಡೆದಿದ್ದು, ಐವರಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.

ಒಕ್ ಲ್ಯಾಂಡ್, ಕ್ಯಾಲಿಫೋರ್ನಿಯಾ ಫೋರ್ಟ್ ಲ್ಯಾಂಡ್ ಗಳಲ್ಲಿ ಜನರು ಬೀದಿಗಿಳಿದಿದ್ದು, ಟ್ರಂಪ್ ಅವರನ್ನು ನಮ್ಮ ಅಧ್ಯಕ್ಷರೆಂದು ಒಪ್ಫಿಕೊಳ್ಳಲು ಸಾಧ್ಯವಿಲ್ಲ. ಟ್ರಂಪ್ ನಮ್ಮ ಅಧ್ಯಕ್ಷರಲ್ಲ ಎಂದು ಘೋಷಣಾ ವಾಕ್ಯಗಳನ್ನು ಕೂಗಿದ್ದಾರೆ. ಪ್ರತಿಭಟನೆ ಪರಿಣಾಮ ರೈಲುಗಳು ಹಾಗೂ ರಸ್ತೆ ಸಂಚಾರಗಳಲ್ಲಿ ಅಡಚಣೆಗಳು ಉಂಟಾಗಿತ್ತು.

ಪ್ರತಿಭಟನೆ ವೇಳೆ ಟ್ರಂಪ್ ಗೆಲುವನ್ನು ಸಂಭ್ರಮಿಸುತ್ತಿದ್ದ ಜನರು ಮತ್ತು ಟ್ರಂಪ್ ವಿರೋಧಿಗಳ ನಡುವೆ ವಾಗ್ವಾದಗಳು ನಡೆದಿದ್ದು, ಈ ವಾಗ್ವಾದವೇ ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗುತ್ತಿದೆ. ಎರಡು ಗುಂಪಿನ ನಡುವೆ ಘರ್ಷಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೋರ್ವ ಗುಂಡಿನ ದಾಳಿಯನ್ನು ನಡೆಸಿದ್ದು, ಪರಿಣಾಮ ಐವರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಐವರ ಪೈಕಿ ಇದೀಗ ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT