ಬಗ್ದಾದ್: ಇರಾಕ್ ನಲ್ಲಿ ಸೋಮವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ ಆರು ಉಗ್ರರು ಹಾಗೂ ಆರು ನಾಗರಿಕರು ಮೃತಪಟ್ಟಿರುವುದಾಗಿ ಆಂತರಿಕ ಸಚಿವಾಲಯ ತಿಳಿಸಿದೆ.
ಉಗ್ರರು ಇಂದು ಇರಾಕ್ ನ ಐನ್-ಅಲ್ ತಮರ್ ನಗರದಲ್ಲಿ ಇಂದು ಆತ್ಮಾಹುತಿ ದಾಳಿ ನಡೆಸಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಕರ್ನಲ್ ಸಾದ್ ಮಾನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇರಾಕಿ ಭದ್ರತಾ ಪಡೆಗಳು ಐವರು ಉಗ್ರರನ್ನು ಹೊಡೆದುರಿಳಿಸಿದ್ದು, ತಪ್ಪಿಸಿಕೊಂಡ ಮತ್ತೊಬ್ಬ ಉಗ್ರ ವಸತಿ ಗೃಹವೊಂದಕ್ಕೆ ಪ್ರವೇಶಿಸಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದರಿಂದ ಆರು ಜನ ಮೃತಪಟ್ಟಿದ್ದಾರೆ ಮತ್ತು ಇತರೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
18 ಮಂದಿಯನ್ನು ಬಲಿ ಪಡೆದ ಆಗಸ್ಟ್ ನಲ್ಲಿ ನಡೆದ ಮದುವೆ ಸಮಾರಂಭದ ಮೇಲೆ ನಡೆದ ದಾಳಿಯ ರೀತಿಯಲ್ಲೇ ಉಗ್ರರು ಈ ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics