ವಿದೇಶ

ಫೇಸ್ ಬುಕ್ ನಲ್ಲಿ ಸುಳ್ ಸುದ್ದಿ ನಿಯಂತ್ರಣಕ್ಕೆ ಕ್ರಮಗಳನ್ನು ಘೋಷಿಸಿದ ಜುಕರ್ಬರ್ಗ್

Srinivas Rao BV
ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಗೆಲುವಿಗೆ ಫೇಸ್ ಬುಕ್ ನ ಸುಳ್ ಸುದ್ದಿಗಳು ನೆರವಾಗಿವೆ ಎಂದು ಅಮೆರಿಕಾದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಆರೋಪ ಮಾಡಿರುವ ಬೆನ್ನಲ್ಲೇ ಫೇಸ್ ಬುಕ್ ನ ಸಿಇಒ ಮಾರ್ಕ್ ಜುಕರ್ಬರ್ಗ್ ಸಾಮಾಜಿಕ ಜಾಲತಾಣದಲ್ಲಿ ಸುಳ್ ಸುದ್ದಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 
ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಸುಳ್ ಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿರುವ ಜುಕರ್ಬರ್ಗ್ " ಜನರು ನಿಖರ ಸುದ್ದಿಯನ್ನು ಬಯಸುತ್ತಾರೆ ಎಂಬುದು ನಮಗೆ ತಿಳಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ ಸುದ್ದಿ ಹಬ್ಬುವುದನ್ನು ತಡೆಗಟ್ಟಲು ನಾವು ಯತ್ನಿಸುತ್ತಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಫೇಸ್ ಬುಕ್ ಸಿಇಒ ತಿಳಿಸಿದ್ದಾರೆ. 
ಯಾವುದು ಸುಳ್ ಸುದ್ದಿ ಯಾವುದು ಸುಳ್ ಸುದ್ದಿಯಲ್ಲ ಎಂಬುದನ್ನು ಜನರಿಗೆ ತಿಳಿಸಲು ಫೇಸ್ ಬುಕ್ ಸಂಸ್ಥೆ ನಿರಂತರವಾಗಿ ಯತ್ನಿಸುತ್ತಿದೆ ಎಂದು ಮಾರ್ಕ್ ಜುಕರ್ಬರ್ಗ್ ಇದೇ ವೇಳೆ ತಿಳಿಸಿದ್ದಾರೆ.  ಫೇಸ್ ಬುಕ್ ನ್ಯೂಸ್ ಫೀಡ್ ಗಳನ್ನು ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಕಾರಿಯಾಗುವಂತೆ ಬದಲಾವಣೆ ಮಾಡಿತ್ತು, ಎಂಬ ಆರೋಪವನ್ನು ತಳ್ಳಿಹಾಕಿರುವ ಫೇಸ್ ಬುಕ್, ಯಾವುದೇ ರಾಜಕೀಯ ಪಕ್ಷದ ಪರವಾಗಿ ನ್ಯೂಸ್ ಫೀಡ್ ಗಳನ್ನು ಬದಲಾವಣೆ ಮಾಡಲಾಗಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದೆ.  ಫೇಸ್ ಬುಕ್ ನಲ್ಲಿ ಪ್ರಕಟವಾಗುವ ಅಂಶಗಳಲ್ಲಿ ಶೇ.99 ರಷ್ಟು ಸತ್ಯಾಂಶಗಳೇ ಇರುತ್ತವೆ. ಕೆಲವೇ ಕೆಲವು ಅಂಶಗಳು ಮಾತ್ರ ಸುಳ್ಳಾಗಿರುತ್ತದೆ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ತಿಳಿಸಿದ್ದಾರೆ. 
SCROLL FOR NEXT