ಬೆದರಿಕೆ ಪತ್ರ 
ವಿದೇಶ

ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ದೇಶ ತೊರೆಯುವಂತೆ ಅಮೆರಿಕ ಮುಸ್ಲಿಂಮರಿಗೆ ಬೆದರಿಕೆ ಪತ್ರ

ಮುಸ್ಲಿಂರು ಸೈತಾನನ ಮಕ್ಕಳು ಎಂದು ಸಂಬೋಧಿಸಲಾಗಿರುವ ಮುಸ್ಲಿಂ ವಿರೋಧಿ ಪತ್ರಗಳು ಉತ್ತರ ಕ್ಯಾಲಿಫೋರ್ನಿಯಾ ಸ್ಯಾನ್ ಓಸೆಯಲ್ಲಿನ ಮಸೀದಿ ಮಾತ್ರವಲ್ಲದೆ...

ಕ್ಯಾಲಿಫೋರ್ನಿಯಾ: ಮುಸ್ಲಿಂರು ಸೈತಾನನ ಮಕ್ಕಳು ಎಂದು ಸಂಬೋಧಿಸಲಾಗಿರುವ ಮುಸ್ಲಿಂ ವಿರೋಧಿ ಪತ್ರಗಳು ಉತ್ತರ ಕ್ಯಾಲಿಫೋರ್ನಿಯಾ ಸ್ಯಾನ್ ಓಸೆಯಲ್ಲಿನ ಮಸೀದಿ ಮಾತ್ರವಲ್ಲದೆ ಲಾಸ್ ಏಂಜಲಿಸ್ ನ ಲಾಂಗ್ ಬೀಚ್ ಮತ್ತು ಕ್ಲಾರಾಮಾಂಟ್ ಮಸೀದಿಗಳಿಗೆ ಬಂದಿವೆ ಎಂದು ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಕೌನ್ಸಿಲ್ ಹೇಳಿದೆ. 
ಬೆದರಿಕೆ ಪತ್ರದಲ್ಲಿ ಮುಸ್ಲಿಂರು ಕೊಳಕರು ಮತ್ತು ಜುಗುಪ್ಸೆ ಹುಟ್ಟಿಸುವವರು ಎಂದು ಜರಿಯಲಾಗಿದೆ. ಅಲ್ಲದೆ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕವನ್ನು ಶುದ್ಧೀಕರಿಸುವ ಕೆಲಸವನ್ನು ಮುಸ್ಲಿಂರಿಂದ ಆರಂಭಿಸಲಿದ್ದಾರೆ ಎಂದು ಬರೆಯಲಾಗಿದೆ. 
ಸೈತಾನನ ಮಕ್ಕಳಾದ ನೀವು ಇನ್ನು ಗಂಟು ಮೂಟೆ ಕಟ್ಟಿಕೊಂಡು ಅಮೆರಿಕದಿಂದ ಹೊರ ನಡೆಯಿರಿ ಎಂದು ತಾಕೀತು ಮಾಡಲಾಗಿರುವುದಾಗಿ ಕೌನ್ಸಿಲ್ ಹೇಳಿದೆ. ಬೆದರಿಕೆ ಪತ್ರ ಹಿನ್ನೆಲೆ ಅಮೆರಿಕನ್ ಮುಸ್ಲಿಂ ಸಂಘದ ಕ್ಯಾಲಿಫೋರ್ನಿಯ ಘಟಕವು ಮಸೀದಿಗಳಿಗೆ ಪೊಲೀಸ್ ರಕ್ಷಣೆಯನ್ನು ಕೋರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!