ವಾಷಿಂಗ್ಟನ್: ಮತಗಳ ಮರು ಎಣಿಕೆ ನಡೆಯುವುದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನವೆಂಬರ್ 8 ರಂದು ನಡೆದ ಅಮೆರಿಕಾ ಅಧ್ಯಕ್ಷ ಹುದ್ದೆಗೆ ನಡೆದ ಮತದಾನವನ್ನು ಮರು ಎಣಿಕೆ ಮಾಡಬೇಕೆಂದು ಗ್ರೀನ್ ಪಾರ್ಟಿ ಅಧ್ಯಕ್ಷ ಜಿಲ್ ಸ್ಟಿಯಾನೇ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಟ್ರಂಪ್, ವೈಟ್ ಹೌಸ್ ಗಾಗಿ ಈ ಎಲ್ಲಾ ಪಿತೂರಿಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.ಫಲಿತಾಂಶದ ನಂತರ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ನನ್ನ ಜೊತೆ ಫೋನಿನಲ್ಲಿ ಸಂಭಾಷಣೆ ನಡೆಸಿದರು. ಮುಂದಿನ ಭವಿಷ್ಯಕ್ಕಾಗಿ ಈ ಫಲಿತಾಂಶವನ್ನ ನಾವೆಲ್ಲರೂ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಅದೇ ಫಲಿತಾಂಶಕ್ಕಾಗಿ ಅಧಿಕ ಹಣ ಮತ್ತು ಸಮಯವನ್ನು ಮತ್ತೆ ವ್ಯಯಿಸಬೇಕಾಗುತ್ತದೆ. ಎಂದು ಟ್ರಂಪ್ ಬೇಸರದಿಂದ ಟ್ವೀಟ್ ಮಾಡಿದ್ದಾರೆ.