ವಿದೇಶ

ಪಿಒಕೆಯ ಕೊಟ್ಲಿಯಲ್ಲಿ ಪಾಕ್ ಸೇನೆ ಹಾಗೂ ಐಎಸ್ಐ ವಿರುದ್ಧ ತಿರುಗಿ ಬಿದ್ದ ಸ್ಥಳೀಯರು

Vishwanath S

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ ಸೀಮಿತ ದಾಳಿ ಬಳಿಕ ಉಗ್ರರ ಶವಗಳನ್ನು ತರಾತುರಿಯಲ್ಲಿ ದಫನ್ ಮಾಡಿ ವಿಶ್ವಮಟ್ಟದಲ್ಲಿ ತೀವ್ರ ಮುಖಭಂಗಕ್ಕೀಡಾಗಿರುವ ಪಾಕಿಸ್ತಾನಕ್ಕೆ ಇದೀಗ ಸ್ವಂತ ನೆಲದಲ್ಲೆ ಸರ್ಕಾರ ಧೋರಣೆ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ಪಾಕ್ ಆಕ್ರಮಿತ ಕಾಶ್ಮೀರದ ಕೊಟ್ಲಿ ಪ್ರದೇಶದಲ್ಲಿ ಸಾವಿರಾರು ನಾಗರಿಕರು ಬೀದಿಗಿಳಿದು ಪಾಕಿಸ್ತಾನ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಸಿದ್ದಾರೆ. ಪಾಕಿಸ್ತಾನ ಮಿಲಿಟರಿ ನಡೆಸುತ್ತಿರುವ ನ್ಯಾಯಬಾಹಿರವಾದ ಹತ್ಯೆಗಳು ಮತ್ತು ನಕಲಿ ಎನ್ ಕೌಂಟರ್ ಗಳು ಪಾಕ್ ಸರ್ಕಾರದ ಧೋರಣೆ ವಿರೋಧಿಸಿದವರ ಹತ್ಯೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದಿರುವ ಪ್ರತಿಭಟನಾಕಾರರು ಪಾಕ್ ಸೈನಿಕರು ಕಾಶ್ಮೀರಿಗಳ ಕಟುಕರು, ಐಎಸ್ಐ ಗಿಂತ ನಾಯಿಯೇ ವಿಧೇಯ ಎಂಬಂತಹ ಘೋಷಣೆಗಳುನ್ನು ಕೂಗುತ್ತಿದ್ದಾರೆ.

ಕಾಶ್ಮೀರ ರಾಷ್ಟ್ರೀಯತಾವಾದಿ ಮುಖಂಡ ಆರಿಫ್ ಶಾಹೀದ್ ಹತ್ಯೆ ಪ್ರಕರಣವನ್ನು ಸ್ವತಂತ್ರ ತನಿಖೆ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

SCROLL FOR NEXT