ಕೊಲಂಬಿಯಾ : 2005 ರಲ್ಲಿ ಮಹಿಳೆಯೊಬ್ಬರ ಜೊತೆ ನಡೆಸಿದ ಅಶ್ಲೀಲ ಸಂಭಾಷಮೆ ಹಾಗೂ ಮಹಿಳೆಗೆ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ದೇಶದ ಜನತೆಯ ಕ್ಷಮೆ ಕೋರಿದ್ದಾರೆ.
ರಿಪಬ್ಲಿಕನ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 2005ರಲ್ಲಿ ನಡೆಸಿದ ಪೋಲಿ ಸಂಭಾಷಣೆಯ ವಿಡಿಯೋ ಬಯಲಾಗಿದೆ. ಇದರಿಂದ ಮತ್ತೊಮ್ಮೆ ಮುಜುಗರಕ್ಕೀಡಾದ ಟ್ರಂಪ್ ಅಮೆರಿಕ ಜನತೆಯ ಕ್ಷಮೆ ಯಾಚಿಸಿದ್ದಾರೆ. ವಾಷಿಂಗ್ಟನ್ ಫೋಸ್ಟ್ ಈ ವಿಡಿಯೋ ಪ್ರಕಟಿಸಿದ ಕೆಲವೇ ಗಂಟೆಗಳಲ್ಲೇ ಟ್ರಂಪ್ ಅಮೆರಿಕಾ ಜನತೆಯ ಕ್ಷಮೆ ಕೋರಿದ್ದಾರೆ.
ಮಹಿಳೆಯರ ಬಗ್ಗೆ ಟ್ರಂಪ್ ಅತ್ಯಂತ ಅಶ್ಲೀಲವಾಗಿ ಸಂಭಾಷಣೆ ನಡೆಸಿರುವ ತುಣುಕುಗಳಿವೆ. ನಾನು ಅವರಿಗೆ ಚುಂಬಿಸಲು ಆರಂಭಿಸಿದೆ ತಡ ಮಾಡಲು ನನ್ನಲ್ಲಿ ತಾಳ್ಮೆ ಇರಲಿಲ್ಲ. ನೀವೊಬ್ಬ ಖ್ಯಾತ ವ್ಯಕ್ತಿಯಾದರೆ ಇದನ್ನು ಮಾಡಲು ಅವರೇ ನಿಮಗೆ ಅನುಮತಿ ನೀಡುತ್ತಾರೆ ಎಂದು ಟ್ರಂಪ್ ಹೇಳಿದ್ದು ದಾಖಲಾಗಿದೆ.
ನಾನು ಹಿಂದೆ ಮಾಡಿದ್ದು ತಪ್ಪು, ಪ್ರಮಾಣ ಮಾಡುತ್ತೇನೆ ನಾನು ನಾಳೆ ಒಳ್ಳೆಯ ವ್ಯಕ್ತಿಯಾಗುತ್ತೇನೆ ಎಂದು ಹೇಳಿರುವ ಅವರು, ಈ ಹಿಂದೆ ಅಮೆರಿಕಾ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಕೂಡ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದರು ಎಂದು ಹೇಳುವ ಮೂಲಕ ಟೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಕಾಲೆಳೆದಿದ್ದಾರೆ.