ಯುನೈಟೆಡ್ ನೇಷನ್ಸ್: ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗದ ಮುಖ್ಯಸ್ಥ ಡೊನಾಲ್ಡ್ ಟ್ರಂಪ್ ಅವರನ್ನು ಅಪಾಯಕಾರಿ ಎಂದು ಹೇಳಿದ್ದು, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಗೊಂಡರೆ ಅಂತಾರಾಷ್ಟ್ರೀಯ ದೃಷ್ಟಿಯಿಂದ ಅಪಾಯ ಸಂಭವಿಸುವುದು ಖಂಡಿತಾ ಎಂದು ಅಭಿಪ್ರಾಯಪಟ್ಟಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿರುವ ವಿಶ್ವಸಂಸ್ಥೆ ಮಾನವಹಕ್ಕುಗಳ ವಿಭಾಗದ ಮುಖ್ಯಸ್ಥ ಜೈದ್ ರಾ ವುದ್ ಅಲ್ ಹುಸ್ಸೇನ್, ಡೊನಾಲ್ಡ್ ಟ್ರಂಪ್ ಅಸ್ಥಿರವಾದ ನಿಲುವುಗಳನ್ನು ಹೊಂದಿದ್ದಾರೆ. ಇವು ಅಂತಾರಾಷ್ಟ್ರೀಯ ದೃಷ್ಟಿಯಿಂದ ಗೊಂದಲಮಯವಾಗಿದ್ದು ಡೊನಾಲ್ಡ್ ಟ್ರಂಪ್ ಅಪಾಯಕಾರಿ ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಈ ವರೆಗೂ ಹೇಳಿದ್ದನ್ನೇ ಆಧಾರವಾಗಿಟ್ಟುಕೊಂಡು ಅವರನ್ನು ಅಲ್ಲಿನ ಜನತೆ ಆಯ್ಕೆ ಮಾಡಿದ್ದೆ ಆದಲ್ಲಿ ಅದು ಪಾಯಕಾರಿ ಬೆಳವಣಿಗೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಜೈದ್ ರಾ ವುದ್ ಅಲ್ ಹುಸ್ಸೇನ್ ಎಚ್ಚರಿಸಿದ್ದಾರೆ.