ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 
ವಿದೇಶ

ನಾನು ಅಧಿಕಾರಕ್ಕೆ ಬಂದರೆ, ಅಮೆರಿಕ-ಭಾರತ ಬೆಸ್ಟ್ ಫ್ರೆಂಡ್ಸ್ ಆಗಿರಲಿದೆ: ಟ್ರಂಪ್

ನಾನು ಅಧಿಕಾರಕ್ಕೆ ಬಂದಿದ್ದೇ ಆದರೆ, ಮುಂಬರುವ ದಿನಗಳಲ್ಲಿ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ವಿಶ್ವದಲ್ಲಿಯೇ ಬೆಸ್ಟ್ ಫ್ರೆಂಡ್ಸ್ ಆಗಲಿವೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್...

ನ್ಯೂಜೆರ್ಸಿ: ನಾನು ಅಧಿಕಾರಕ್ಕೆ ಬಂದಿದ್ದೇ ಆದರೆ, ಮುಂಬರುವ ದಿನಗಳಲ್ಲಿ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ವಿಶ್ವದಲ್ಲಿಯೇ ಬೆಸ್ಟ್ ಫ್ರೆಂಡ್ಸ್ ಆಗಲಿವೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಅನಿವಾಸಿ ಭಾರತೀಯರು ಹಮ್ಮಿಕೊಂಡಿದ್ದ ರಿಪಬ್ಲಿಕನ್ ಅಭಿಯಾನದಲ್ಲಿ ಮಾತನಾಡಿರುವ ಅವರು, ಭಾರತ ವಿಶ್ವದಲ್ಲಿಯೇ ಅತೀದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರವಾಗಿದೆ. ಅಮೆರಿಕಾ ದೇಶದಕ್ಕೂ ಭಾರತ ಮಿತ್ರರಾಷ್ಟ್ರವಾಗಿದೆ. ನಾನು ಅಧಿಕಾರಕ್ಕೆ ಬಂದಿದ್ದೇ ಆದರೆ, ಅಮೆರಿಕ ಹಾಗೂ ಭಾರತ ಉತ್ತಮ ಗೆಳೆತನ ಹೊಂದಿರುವ ರಾಷ್ಟ್ರಗಳಾಗಲಿವೆ ಎಂದು ಹೇಳಿದ್ದಾರೆ.

ಮುಕ್ತ ವ್ಯಾಪಾರವನ್ನು ಹೊಂದಿರುವ ದೇಶ ನಮ್ಮದು. ಇತರೆ ರಾಷ್ಟ್ರಗಳೊಂದಿಗೆ ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿದ್ದೇವೆ. ಭಾರತದೊಂದಿಗೂ ಉತ್ತಮ ವ್ಯವಹಾರವನ್ನು ಮಾಡುತ್ತೇವೆ. ಭಾರತ ಹಾಗೂ ಅಮೆರಿಕ ನಡುವೆ ಮುಂದಿನ ದಿನಗಳಲ್ಲಿ ಅದ್ಭುತ ಭವಿಷ್ಯವಿದೆ ಎಂದಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿರುವ ಅವರು, ಮೋದಿಯವರ ನೇತೃತ್ವದಲ್ಲಿ ಭಾರತ ಯಶಸ್ವಿಯಾಗಿ ಸಾಗುತ್ತಿದೆ. ಜಾಗತಿಕ ಮಟ್ಟದಲ್ಲೂ ವ್ಯಾಪಾರ ವ್ಯವಹಾರವನ್ನು ವಿಸ್ತರಿಸಿದೆ. ಇಂತಹ ದೇಶದೊಂದಿಗೆ ಕೈಜೋಡಿಸಲು ನಾವು ಸದಾಕಾಲ ಉತ್ಸುಕರಾಗಿರುತ್ತೇವೆ ಎಂದು ತಿಳಿಸಿದ್ದಾರೆ. 

ಮೋದಿಯವರು ಉತ್ತಮ ನಾಯಕರಾಗಿದ್ದಾರೆ. ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲು ತುಂಬಾ ಉತ್ಸುಕನಾಗಿರುವೆ. ಮೋದಿಯವರು ಅಧಿಕಾರವಹಿಸಿಕೊಂಡಾಗಿನಿಂದಲೂ ಭಾರತಲ್ಲಿ ಸಾಕಷ್ಟು ಆರ್ಥಿಕ ಸುಧಾರಣೆ ಮತ್ತು ಆಡಳಿತಾತ್ಮಕ ಸುಧಾರಣೆಗಳು ಕಂಡುಬಂದಿದೆ. ಇದೇ ರೀತಿಯಲ್ಲಿ ಆಡಳಿತ ನಡೆಸಿ ಚುರುಕು ಮುಟ್ಟಿಸುವುದು ನಮ್ಮ ಉದ್ದೇಶವಾಗಿದೆ.

ನಾನೊಬ್ಬ ಹಿಂದೂ ಸಮುದಾಯದ ದೊಡ್ಡ ಅಭಿಮಾನಿಯಾಗಿದ್ದೇನೆ. ಭಾರತ ದೇಶದ ಅಭಿಮಾನಿಯಾಗಿದ್ದೇನೆ. ನಾನು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದೇ ಆದರೆ, ಶ್ವೇತಭವನದಲ್ಲಿ ಹಿಂದೂ ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದಾರೆ.

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಮುಂಬೈ ಮೇಲಿನ ದಾಳಿ ಹಾಗೂ ಭಾರತೀಯ ಸಂಸತ್ತಿನ ಮೇಲೆ ನಡೆಸಲಾದ ದಾಳಿ ನಿಜಕ್ಕೂ ಸಹಿಲಾಗದ ದಾಳಿಯಾಗಿದೆ. ಭಾರತದಲ್ಲಿ ಮುಂಬೈ ಮಹಾನಗರಿ ನನಗೆ ಅಚ್ಚುಮೆಚ್ಚಿನ ನಗರವಾಗಿದೆ. ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ. ಉಗ್ರರನ್ನು ಸದೆಬಡಿಯಲು ನಾವು ನೆರವು ನೀಡುತ್ತೇವೆಂದು ಘೋಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT