ವಿದೇಶ

ಹಿಟ್ಲರ್ ಹುಟ್ಟಿದ ಮನೆ ನೆಲಸಮವಿಲ್ಲ ಆದರೆ ಗುರುತು ಸಿಗದಂತೆ ವಿನ್ಯಾಸ ಬದಲಾವಣೆ

Guruprasad Narayana
ವಿಯೆನ್ನಾ: ವಿಶ್ವದ ಅತಿ ದುಷ್ಟ ಸರ್ವಾಧಿಕಾರಿ ಎನ್ನಲಾಗುವ ಅಡಾಲ್ಫ್ ಹಿಟ್ಲರ್ ಹುಟ್ಟಿದ ಮನೆಯನ್ನು ನೆಲಸಮಗೊಳಿಸಲಾಗುತ್ತದೆ ಎಂದು ಮಾಡಿದ್ದ ಘೋಷಣೆಯಿಂದ ಹಿಂದೆ ಸರಿದಂತೆ ಕಾಣುವ ಆಸ್ಟ್ರಿಯಾದ ಸಚಿವ ಈಗ ಆ ಮನೆಯ ಗುರುತನ್ನು ಅಳಿಸಿ ಹಾಕುವ ಗುರಿಯನ್ನು ಹಾಕಿಕೊಂಡಿದ್ದಾರೆ. 
ಮಂಗಳವಾರ ಸಂಪುಟಕ್ಕೆ ಈ ವಿಷಯ ತಿಳಿಸಿರುವ ಆಂತರಿಕ ಸಚಿವ ವುಲ್ಫ್ ಗ್ಯಾಂಗ್ ಸೊಬೊಟ್ಕ, ಬ್ರೌನೌ ಆಮ್ ಇನ್ ನಲ್ಲಿರುವ ಮನೆಯ ಹೊರಗಿನ ಭಾಗವನ್ನು ಪತ್ತೆ ಹಚ್ಚಲು ಸಾಧ್ಯವಾಗದಂತೆ ಬದಲಾಯಿಸಲಾಗುತ್ತದೆ ಎಂದಿದ್ದಾರೆ. 
ಇದನ್ನು ನೆಲಸಮ ಮಾಡುವುದಾಗಿ ಕರೆಯಬೇಕಾ ಅಥವಾ ಅಲ್ಲವೋ ಎಂಬುದು ಚರ್ಚೆಗೆ ಮುಕ್ತವಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. 
ಈ ಕಟ್ಟಡವನ್ನು ಸರ್ಕಾರದ ಆಡಳಿತ ಕಾರ್ಯಗಳಿಗೆ ಅಥವಾ ಧರ್ಮಾರ್ಥ ಕೆಲಸಗಳಿಗೆ ಬಳಸಿಕೊಳ್ಳಬೇನ್ನುವ ಸಲಹೆಯನ್ನು ಪರಿಶೀಲಿಸಲು ತಜ್ಞರ ಸಮಿತಿ ಸಭೆ ಸೇರಿದೆ. ಅಂಗವಿಕಲರಿಗೆ ಸೇವೆ ನೀಡಲು ಕೂಡ ಬಳಸಿಕೊಳ್ಳುವ ಪ್ರಸ್ತಾವನೆ ಇದೆ. 
ಕಟ್ಟಡವನ್ನೇ ನೆಲಸಮಗೊಳಿಸುವ ಪ್ರಸ್ತಾವನೆ ಅವರು ನೀಡಿಲ್ಲ ಬದಲಾಗಿ ವಿನ್ಯಾಸವನ್ನು ಬಹಳಷ್ಟು ಬದಲಿಸಿ ಅದರ ಚಹರೆಯ ಮೌಲ್ಯ ಕಳೆದುಕೊಳ್ಳುವಂತೆ ಮಾಡುವುದು ಉದ್ದೇಶ ಇದು ಎಂದು ಸೊಬೊಟ್ಕ ಹೇಳಿದ್ದಾರೆ. 
ನಿಯೋ ನಾಜಿಗಳು ಇದನ್ನು ಪಾರಂಪರಿಕ ಸ್ಮಾರಕವಾಗಿ ಬಳಸದೆ ಇರದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. 
SCROLL FOR NEXT