ವಿದೇಶ

ಫಿಲಿಫೈನ್ಸ್‌ನಲ್ಲಿ ಪ್ರತಿಭಟನಾನಿರತರನ್ನು ಚದುರಿಸಲು ವ್ಯಾನ್ ಹರಿಸಿದ ಪೊಲೀಸರು

Vishwanath S
ಮನಿಲ: ಅಮೆರಿಕ ನೀತಿಗಳ ವಿರೋಧಿಸಿ ಫಿಲಿಫೈನ್ಸ್‌ನ ರಾಜಧಾನಿ ಮಲಿನದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಎದುರು ನಡೆಸಲಾಗುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಪ್ರತಿಭಟನಕಾರರ ಮೇಲೆ ಪೊಲೀಸ್ ವ್ಯಾನ್ ಹರಿಸಿದ್ದಾರೆ. 
ಅಮೆರಿಕದ ವಿದೇಶಾಂಗ ನೀತಿಗಳು ನಮಗೆ ಬೇಡ ಎಂದು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದರು ಈ ವೇಳೆ ಪ್ರತಿಭಟನೆಯನ್ನು ಹತ್ತಿಕ್ಕಲು ಬಂದ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಪೊಲೀಸ್ ವ್ಯಾನ್ ಹರಿಸಿದ್ದಾರೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, 25ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. 
ಪ್ರತಿಭಟನಾ ನಿರತರನ್ನು ನಾಯಿಗಳಂತೆ ಕಂಡ ಫಿಲಿಫೈನ್ಸ್‌ ಪೊಲೀಸರು ಅವರ ಮೇಲೆ ಮನಬಂದಂತೆ ವ್ಯಾನ್ ಹರಿಸಿದ್ದಾರೆ. ಈ ವೇಳೆ ವ್ಯಾನ್ ಕೆಳಗೆ ಸಿಲುಕಿ ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ. ಇದರಿಂದ ಕೆರಳಿದ ಪ್ರತಿಭಟನಾಕಾರರು ಪೊಲೀಸ್ ವ್ಯಾನ್ ಗಳ ಮೇಲೆ ದೊಣ್ಣೆ ಕೋಲುಗಳಿಂದ ಬಡಿದಿದ್ದಾರೆ. ಅಲ್ಲದೆ ಕಲ್ಲುಗಳನ್ನು ತೂರಿದ್ದಾರೆ. ಯಾವುದಕ್ಕೂ ಬಗ್ಗದ ಪ್ರತಿಭಟನಾಕಾರರ ಮೇಲೆ ಕೊನೆಗೆ ಪೊಲೀಸರು ವ್ಯಾನ್ ಗಳನ್ನು ಹರಿಸಿದ್ದಾರೆ. 
SCROLL FOR NEXT