ವಾಷಿಂಗ್ಟನ್: ಭಾರತೀಯರು ಹಾಗೂ ಹಿಂದೂಗಳು ಅಮೆರಿಕಾದ ವೈಟ್ ಹೌಸ್ ಜೊತೆ ನಿಜವಾದ ಸ್ನೇಹ ಹೊಂದಲಿದ್ದು, ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆ ಸೋಲಿಸಲಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾರತೀಯ ಅಮೆರಿಕನ್ ಟಿವಿ ಚಾನೆಲ್ ಗೆ ಜಾಹೀರಾತು ನೀಡಿದ್ದಾರೆ,
2014ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ್ದ ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂಬ ಘೋಷಣೆಯನ್ನು ಬಳಸಿಕೊಂಡು 'ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ' ಎಂದು ಹೇಳಿ ಜಾಹೀರಾತು ನೀಡಿದ್ದಾರೆ.
ಹಿಂದೂಗಳ ದೊಡ್ಡ ಹಬ್ಬವಾದ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಆರಂಬಿಸಿರುವ ಟ್ರಂಪ್ ವಿ ಲವ್ ದಿ ಹಿಂದೂಸ್, ವಿ ಲವ್ ಇಂಡಿಯಾ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ. ಎಲ್ಲಾ ಇಂಡಿಯನ್ ಅಮೆರಿಕನ್ನರ ಟಿವಿ ಚಾನೆಲ್ ನಲ್ಲಿ ದಿನಂಪ್ರತಿ 20 ಬಾರಿ ಈ ಜಾಹೀರಾತು ಪ್ರಸಾರವಾಗುತ್ತಿದೆ ಎಂದು ಟ್ರಂಪ್ ಆಪ್ತ ಶಲ್ಲಿ ಕುಮಾರ್ ಹೇಳಿದ್ದಾರೆ. ಹಿಂದಿಯಲ್ಲಿ ಸ್ಲೋಗನ್ ಹೇಳಲು ತಾವು ಟ್ರಂಪ್ ಗೆ ಸಹಾಯ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.