ವಿದೇಶ

ಕಾಲ್ ಸೆಂಟರ್ ಹಗರಣ: 32 ಭಾರತೀಯರ ವಿರುದ್ಧ ಅಮೇರಿಕಾದಲ್ಲಿ ಚಾರ್ಜ್ ಶೀಟ್

Srinivas Rao BV

ವಾಷಿಂಗ್ ಟನ್: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ 5 ಕಾಲ್ ಸೆಂಟರ್ ಗಳ ವಿರುದ್ಧ ಅಮೆರಿಕದ ಸಂತ್ರಸ್ತರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಅಲ್ಲಿನ ನ್ಯಾಯಾಂಗ ಅಧಿಕಾರಿಗಳು ಕಾಲ್ ಸೆಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಅಮೆರಿಕದಲ್ಲಿರುವ ದಕ್ಷಿಣ ಏಷ್ಯಾದ ಸಂತ್ರಸ್ತರಿಗೆ ಅಮೆರಿಕದ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಕಾಲ್ ಸೆಂಟರ್, ನ ಸಿಬ್ಬಂದಿಗಳು, ಸರ್ಕಾರಕ್ಕೆ ಹಣ ಪಾವತಿ ಮಾಡದೆ ಇದ್ದರೆ, ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ಅಮೆರಿಕದ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಡೆಬಿಟ್ ಕಾರ್ಡ್ ಹಾಗೂ ವೈರ್ ಟ್ರಾನ್ಸ್ಫರ್ ಮೂಲಕ ಹಣ ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಹಣ ಪಾವತಿ ಮಾಡುತ್ತಿದ್ದಂತೆಯೇ ಅದನ್ನು ಬೇರೆ ದೇಶಕ್ಕೆ ವರ್ಗಾಯಿಸಲಾಗಿದೆ ಎಂದು ಅಮೆರಿಕ ನ್ಯಾಯಾಂಗ ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ 20 ಜನರನ್ನು ಬಂಧಿಸಿರುವ ಅಮೆರಿಕ, ಒಟ್ಟು 56 ಜನರ ವಿರುದ್ಧ ಆರೋಪ ಪಟ್ಟಿ ದಾಖಲಿಸಿದ್ದು. ಭಾರತದ 5 ಕಾಲ್ ಸೆಂಟರ್ ಹಾಗೂ 32 ಜನರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ತಿಳಿದುಬಂದಿದೆ. ಆರೋಪ ಪಟ್ಟಿಯಲ್ಲಿ ಹೆಸರುಳ್ಳ ವ್ಯಕ್ತಿಗಳನ್ನು ಗಡಿಪಾರು ಮಾಡುವಂತೆ ಭಾರತಕ್ಕೆ ಅಮೆರಿಕ ಅಧಿಕಾರಿಗಳು ಮನವಿ ಮಾಡಲಿದ್ದಾರೆ.

SCROLL FOR NEXT