ವಿದೇಶ

ಪ್ರಾದೇಶಿಕ ಭದ್ರತೆ ದೃಷ್ಟಿಯಿಂದ ಭಾರತ-ಪಾಕ್ ಮಾತುಕತೆಗೆ ಉತ್ತೇಜನ: ಅಮೆರಿಕ

Srinivas Rao BV

ವಾಷಿಂಗ್ ಟನ್: ಪ್ರಾದೇಶಿಕ ಭದ್ರತೆ ದೃಷ್ಟಿಯಿಂದ ಪರಸ್ಪರ ಎದುರಿಸುತ್ತಿರುವ ಆತಂಕಗಳನ್ನು ನಿವಾರಿಸಿಕೊಳ್ಳುವುದಕ್ಕೆ ಭಾರತ-ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ಉತ್ತೇಜಿಸುವುದಾಗಿ ಅಮೆರಿಕ ತಿಳಿಸಿದೆ.

ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗುವ ನಿಟ್ಟಿನಲ್ಲಿ ಮಾತುಕತೆ ನಡೆಯಬೇಕು, ಇದಕ್ಕಾಗಿ ಅಮೆರಿಕ ಎಲ್ಲಾ ರೀತಿಯ ಉತ್ತೇಜನವನ್ನು ನೀಡಲಿದೆ ಎಂದು ಅಮೆರಿಕದ ಸಹವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಆತಂಕ, ಉದ್ವಿಗ್ನ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅದು ಮತ್ತೊಂದು ಸಮಸ್ಯೆಗೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮುಂದುವರೆಯಬೇಕು ಎಂದು ಮಾರ್ಕ್ ಟೋನರ್ ಹೇಳಿದ್ದಾರೆ.    
ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಡೆಗಟ್ಟುವ ಒಂದೇ ಕಾರಣದಿಂದ ಅಮೆರಿಕ ಭಾರತ-ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ಉತ್ತೇಜಿಸಲಿದೆ ಎಂದು ಅಮೆರಿಕ ಹೇಳಿದೆ.

SCROLL FOR NEXT