ವಿದೇಶ

ಭಾರತದ ಎನ್ ಎಸ್ ಜಿ ಸದಸ್ಯತ್ವ ಬೆಂಬಲಿಸಲು ಬದ್ಧ: ಅಮೆರಿಕ

Srinivas Rao BV

ವಾಷಿಂಗ್ ಟನ್: ಭಾರತದ ಮಹತ್ವಾಕಾಂಕ್ಷಿ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ಅಡ್ಡಿ ಪಡಿಸಿದ್ದರೂ, ಅಮೆರಿಕ ಮಾತ್ರ ಭಾರತದ ಸದಸ್ಯತ್ವವನ್ನು ಬೆಂಬಲಿಸುವ ವಿಚಾರದಲ್ಲಿ ಬದ್ಧತೆ ಹೊಂದಿರುವುದಾಗಿ ಹೇಳಿದೆ.

ಎನ್ಎಸ್ ಜಿ ಸದಸ್ಯತ್ವದ ವಿಚಾರದಲ್ಲಿ ನಡೆಯುವ ಚರ್ಚೆ ಗೌಪ್ಯವಾಗಿರುತ್ತದೆ. ಆದ್ದರಿಂದ ಚರ್ಚೆಯ ಅಂಶಗಳನ್ನು ಹೇಳಲು ಸಾಧ್ಯವಾಗುವುದಿಲ್ಲ, ಆದರೆ ಭಾರತದ ಸದಸ್ಯತ್ವಕ್ಕೆ ನಮ್ಮ ಬೆಂಬಲ ಮುಂದುವರೆಸುತ್ತೇವೆ ಎಂದು ಅಮೆರಿಕದ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ಸಿಯೋಲ್ ನಲ್ಲಿ ನಡೆದಿದ್ದ ಸಭೆಯಲ್ಲಿ ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ಅಡ್ಡಿ ವ್ಯಕ್ತಪಡಿಸಿತ್ತು. ಇದಾದ ಬಳಿಕ ಅನೇಕ ಬಾರಿ ಅಮೆರಿಕ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಕೆಲವು ದಿನಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಸಹ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲಿಸುವುದಾಗಿ ತಿಳಿಸಿದ್ದರು.

SCROLL FOR NEXT