ಗೂಗಲ್ ಚಿತ್ರ 
ವಿದೇಶ

ನಮಕ್ ಹರಾಮ್ ಕಂಟ್ರಿ ಇಂಡಿಯಾ: ಪಾಕಿಸ್ತಾನಿ ಮಾಧ್ಯಮದ ಕಿಡಿಗೇಡಿ ಕೃತ್ಯ

ಗೂಗಲ್ ನಲ್ಲಿ ನಮಕ್ ಹರಾಮ್ ಕಂಟ್ರಿ ಯಾವುದು ಸೆರ್ಚ್ ಕೊಟ್ಟರೇ ಇಂಡಿಯಾ ಎಂದು ತೋರಿಸುತ್ತದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿ ..

ಲಾಹೋರ್: ಗೂಗಲ್ ನಲ್ಲಿ ನಮಕ್ ಹರಾಮ್ ಕಂಟ್ರಿ ಯಾವುದು ಸೆರ್ಚ್ ಕೊಟ್ಟರೇ ಇಂಡಿಯಾ ಎಂದು ತೋರಿಸುತ್ತದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿ ಮತ್ತೆ ತನ್ನ ನೀಚ ಬುದ್ದಿ ತೋರಿದೆ.

ಪಾಕಿಸ್ತಾನ ಡೈಲಿ ಎಂಬ ದಿನಪತ್ರಿಕೆಯೊಂದು ಗೂಗಲ್ ನಲ್ಲಿ ನಮಕ್ ಹರಾಮ್ ಕಂಟ್ರಿ ಎಂದು ಹುಡುಕಾಟ ನಡೆಸಿದರೆ, ಭಾರತದ ಧ್ವಜವನ್ನು ಗೂಗಲ್ ತೋರಿಸುತ್ತದೆ ಎಂದು ವರದಿ ಮಾಡಿದೆ.

ಯು ಎಸ್ ಮೂಲದ ತಂತ್ರಜ್ಞಾನ ದೈತ್ಯ ಭಾರತವನ್ನು ನಮಕ್ ಹರಾಮ್ ದೇಶ ಎಂದು ಪರಿಗಣಿಸಿರುವುದನ್ನು ಹೆಚ್ಚಿನ ಪಾಕಿಸ್ತಾನಿಯರು ಇಷ್ಟ ಪಟ್ಟಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ನಮಕ್ ಹರಾಮ್ ಕಂಟ್ರಿ ಜೊತೆಗೆ ಭಾರತದ ಧ್ವಜ ಇರುವ ಚಿತ್ರವನ್ನು ಟ್ರೋಲ್ ಮಾಡಲು ಪಾಕಿಸ್ತಾನ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಪಾಕಿಸ್ತಾನ ಹ್ಯಾಕರ್ಸ್ ಗಳು ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ನಲ್ಲಿ ಈ ರೀತಿ ಕೆಲಸ ಮಾಡಿರಬಹುದು ಎಂದು ಹೇಳಲಾಗಿದೆ.

ನಮಕ್ ಹರಾಮ್ ಎಂಬುದು ಭಾರತದ ಪ್ರಸಿದ್ಧ ಹಿಂದಿ ಸಿನಿಮಾವಾಗಿದೆ.ಅಮಿತಾಬ್ ಬಚ್ಚನ್ ಮತ್ತು ರಾಜೇಶ್ ಖನ್ನಾ ಈ ಚಿತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಹೆಸರಿನ ಜೊತೆ ಯಾವ ದೇಶದಲ್ಲಿ ಚಿತ್ರ ತಯಾರಾಯಿತು ಎಂದು ಹುಡುಕಾಟ ನಡೆಸಿದರೆ, ಗೂಗಲ್ ಸಿನಿಮಾ ಹೆಸರಿನ ಜೊತೆಗೆ ದೇಶದ ಧ್ವಜವನ್ನು ತೋರಿಸುತ್ತದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು