ವಿದೇಶ

ತನ್ನನ್ನು ಹಿಟ್ಲರ್ ಗೆ ಹೋಲಿಸಿಕೊಂಡ ಫಿಲಿಪೈನ್ಸ್ ಅಧ್ಯಕ್ಷ

Guruprasad Narayana
ಮನಿಲಾ: ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ದೂತೆರ್ಟ್ ತಮ್ಮನ್ನು ಜರ್ಮನಿಯ ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಹೋಲಿಸಿಕೊಂಡಿದ್ದು, ನಾಜಿ ಮುಖಂಡ ಯಹೂದಿಗಳನ್ನು ಕೊಂದಂತೆ ನಾನು ಲಕ್ಷಾಂತರ ಡ್ರಗ್ ವ್ಯಸನಿಗಳನ್ನು ಕೊಲ್ಲಲಿದ್ದೇನೆ ಎಂದಿದ್ದಾರೆ. 
"ಹಿಟ್ಲರ್ ಮೂರು ದಶಲಕ್ಷ ಯಹೂದಿಗಳು ಹತ್ಯೆ ಮಾಡಿದರು. ಈಗ ಇಲ್ಲಿ ಮೂರೂ ದಶಲಕ್ಷ ಇದ್ದಾರೆ. ಹೌದು 3 ದಶಲಕ್ಷ ಡ್ರಗ್ ವ್ಯಸನಿಗಳು (ಫಿಲಿಪೈನ್ಸ್ ನಲ್ಲಿ)" ಎಂದು ದಾವವೋ ನಗರದಲ್ಲಿ ಫಿಲಿಪೈನ್ಸ್ ಅಧ್ಯಕ್ಷ ಹೇಳಿದ್ದಾಗಿ ಸಿ ಎನ್ ಎನ್ ವರದಿ ಮಾಡಿದೆ. 
"ಅವರುಗಳನ್ನು ಕತ್ತರಿಸಿ ಹಾಕಲು ನನಗೆ ಖುಷಿಯಾಗುತ್ತದೆ. ಜೆರ್ಮನಿಗೆ ಕನಿಷ್ಠ ಹಿಟ್ಲರ್ ಇದ್ದರು. ಫಿಲಿಪೈನ್ಸ್ ಗೆ ನಾನಿದ್ದೇನೆ. ನನ್ನ ಸಂತ್ರಸ್ತರು ಯಾರು ಎಂದು ನಿಮಗೆಲ್ಲ ಒತ್ತಿದೆ. ಅವರೆಲ್ಲರೂ ಅಪರಾಧಿಗಳು ಮತ್ತು ನನ್ನ ದೇಶ ಎದುರಿಸುತ್ತಿರುವ ಸಮಸ್ಯೆಯನ್ನು ಮುಗಿಸಿ ಮುಂದಿನ ಪೀಳೆಗೆ ಈ ಚಟಕ್ಕೆ ಬೀಳದಂತೆ ಉಳಿಸಬೇಕಿದೆ" ಎಂದಿದ್ದಾರೆ. 
ಈ ಹೇಳಿಕೆಯನ್ನು ವಿಶ್ವ ಜ್ಯುಯಿಷ್ ಕಾಂಗ್ರೆಸ್ ಅಧ್ಯಕ್ಷ ರೊನಾಲ್ಡ್ ಲಾಡರ್ ಖಂಡಿಸಿದ್ದಾರೆ. "ಈ ಹೇಳಿಕೆ ಬೇಜವಾಬ್ದಾರಿತನದ್ದು ಮತ್ತು ಅಧ್ಯಕ್ಷ ದೂತೆರ್ಟ್ ಕೂಡಲೇ ಕ್ಷಮೆ ಕೋರಬೇಕು" ಎಂದು ಅವರು ಆಗ್ರಹಿಸಿದ್ದಾರೆ. 
"ಡ್ರಗ್ ವ್ಯಸನ ಗಂಭೀರವಾದದ್ದು, ಆದರೆ ಅಧ್ಯಕ್ಷ ದೂತೆರ್ಟ್ ಹೇಳಿರುವುದು ಮಾನವ ಜೀವನಕ್ಕೆ ಅವಮಾನ ಮಾಡುವಂತಹ ಮಾತುಗಳು ಮತ್ತು ಅವು ಅಮಾನವೀಯ" ಎಂದು ಲಾಡರ್ ಹೇಳಿದ್ದಾರೆ. 
SCROLL FOR NEXT