ವಿದೇಶ

ಹಾಂಕಾಂಗ್: ಹರಾಜಿನಲ್ಲಿ 71.2 ಮಿಲಿಯನ್ ಡಾಲರ್ ಗೆ ಮಾರಾಟವಾದ ಪಿಂಕ್ ಸ್ಟಾರ್ ವಜ್ರ

Sumana Upadhyaya
ಹಾಂಗ್ ಕಾಂಗ್: ಪಿಂಕ್ ಸ್ಟಾರ್ ವಜ್ರ ನಿನ್ನೆ ಹಾಂಕ್ ಕಾಂಗ್ ನಲ್ಲಿ 71.2 ದಶಲಕ್ಷ ಡಾಲರ್ ಗೆ ಹರಾಜಿನಲ್ಲಿ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
59.60 ಕ್ಯಾರಟ್ ನ ಪಿಂಕ್ ಸ್ಟಾರ್ ಎಂಬ ವಜ್ರ ಇದುವರೆಗೆ ಬಿಕರಿಯಾದ ವಜ್ರಗಳಲ್ಲಿ ಅತ್ಯಂತ ಬೆಲೆಬಾಳುವದ್ದು ಎಂದು ಜೆಮಾಲಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕಾ ಹೇಳಿದೆ.
ವಜ್ರದ ಮಾರಾಟ ಹೆಮ್ಮೆ ತಂದಿದೆ ಎಂದು ಲಂಡನ್ ನ  ಸೋಥೆಬಿ ಹರಾಜು ಮನೆ ತಿಳಿಸಿದೆ.
SCROLL FOR NEXT