ಸ್ವೀಡನ್ ನಲ್ಲಿ ಉಗ್ರ ದಾಳಿ 
ವಿದೇಶ

ಸ್ವೀಡನ್ ನಲ್ಲಿ ಉಗ್ರ ದಾಳಿ: 4ಕ್ಕೇರಿದ ಸಾವಿನ ಸಂಖ್ಯೆ, 15 ಮಂದಿಗೆ ಗಾಯ

ಸ್ವೀಡನ್ ದೇಶದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಜನರ ಮೇಲೆ ಉಗ್ರರು ಟ್ರಕ್ ಹರಿಸಿದ ಪರಿಣಾಮ ಸಾವನ್ನಪ್ಪಿದ್ದವರ ಸಂಖ್ಯೆ ಶನಿವಾರ 4ಕ್ಕೇರಿದೆ.

ಸ್ಟಾಕ್ ಹೋಮ್: ಸ್ವೀಡನ್ ದೇಶದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಜನರ ಮೇಲೆ ಉಗ್ರರು ಟ್ರಕ್ ಹರಿಸಿದ ಪರಿಣಾಮ ಸಾವನ್ನಪ್ಪಿದ್ದವರ ಸಂಖ್ಯೆ ಶನಿವಾರ 4ಕ್ಕೇರಿದೆ.

ರಾಜಧಾನಿ ಸ್ಟಾಕ್ ಹೋಮ್ ನ ಕೇಂದ್ರ ಭಾಗದಲ್ಲಿ ದಾಳಿ ನಡೆದಿದ್ದು, ರಸ್ತೆ ಮೇಲಿದ್ದ ಟ್ರಕ್ ನೋಡ ನೋಡುತ್ತಿದ್ದಂತೆಯೇ ಫುಟ್ ಪಾತ್ ಮೇಲಿದ್ದ ಜನರ ಮೇಲೆ ಹರಿದಿದೆ. ಕೇಂದ್ರ ಸ್ಟಾಕ್ ಹೋಮ್ ನ ಅತ್ಯಂತ ಜನನಿಬಿಡ  ಪ್ರದೇಶವಾದ ಕ್ವೀನ್ಸ್ ಸ್ಟ್ರೀಟ್ ನಲ್ಲಿ ಈ ದಾಳಿ ನಡೆಸಲಾಗಿದ್ದು, ಆರಂಭದಲ್ಲಿ ಇದನ್ನು ಅಪಘಾತ ಎಂದ ಎಣಿಸಲಾಗಿತ್ತು. ಆದರೆ ಬಳಿಕ ಟ್ರಕ್ ಚಾಲಕ ಉದ್ದೇಶಪೂರ್ವಕವಾಗಿಯೇ ಟ್ರಕ್ ಅನ್ನು ಜನರ ಮೇಲೆ ಹರಿಸಿದ್ದಾನೆ. ಇನ್ನು  ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ದಾಳಿಕೋರನ ಕುರಿತು ಮಾಹಿತಿ ಕಲೆಹಾಕಿದ ಪೊಲೀಸರು ಕಾರ್ಯಾಚರಣೆ ಶಂಕಿತ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಇನ್ನು ಘಟನೆಯನ್ನು ಉಗ್ರ ದಾಳಿ ಎಂದು ಸ್ವೀಡನ್ ಪ್ರಧಾನಿ ಸ್ಟೆಫನ್ ಲಾಫ್ವೆನ್ ಖಚಿತ ಪಡಿಸಿದ್ದು, ಇಂತಹ ದುಷ್ಕೃತ್ಯಗಳಿಂದ ಸ್ವೀಡನ್ ಅನ್ನು ಹಣಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ದಾಳಿ ಬೆನ್ನಲ್ಲೇ ಉಗ್ರರ ವಿರುದ್ಧ  ಕಠಿಣ ಕ್ರಮ ಜರುಗಿಸುವಂತೆಯೂ ಭದ್ರತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆ ಹೊತ್ತಿಲ್ಲವಾದರೂ, 2010ರಲ್ಲಿ ಯೂರೋಪ್ ನಲ್ಲಿ ಟ್ರಕ್ ದಾಳಿ ನಡೆಸಿದ್ದ ಅಲ್ ಖೈದಾ ಉಗ್ರ ಸಂಘಟನೆಯೇ ಈ ದಾಳಿಯನ್ನೂ ನಡೆಸಿರಬಹುದು ಎಂದು  ಶಂಕಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

'ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ'.. 'ಉತ್ತರಿಸದಿದ್ದ ಮೇಲೆ ಅಧಿವೇಶನ ಏಕೆ ಕರೆಯಬೇಕು': ಸ್ಪೀಕರ್ UT Khader ಕಿಡಿ

SCROLL FOR NEXT