ವಿದೇಶ

ಅಮೆರಿಕ ಸರ್ಕಾರದ ಬೌದ್ಧಿಕ ಆಸ್ತಿ ಜಾರಿ ಸಂಯೋಜಕರಾಗಿ ಭಾರತೀಯ ನೇಮಕ

Srinivasamurthy VN

ವಾಷಿಂಗ್ಟನ್: ಭಾರತೀಯರ ಬುದ್ಧಿ ಶಕ್ತಿಗೆ ಮತ್ತೆ ಜಾಗತಿಕ ಮನ್ನಣೆ ದೊರೆತಿದ್ದು, ಅಮೆರಿಕ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಒಂದಾದ, ಶ್ವೇತಭವನದ ಬೌದ್ಧಿಕ ಆಸ್ತಿ ಜಾರಿ ಸಂಯೋಜಕರಾಗಿ ಭಾರತೀಯ ವಿಶಾಲ್ ಜೆ ಅಮಿನ್  ಅವರು ಆಯ್ಕೆಯಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಿಫಾರಸ್ಸು ಮೇರೆಗೆ ಶ್ವೇತ ಭವನದ ಬೌದ್ಧಿಕ ಆಸ್ತಿ ಜಾರಿ ಸಂಯೋಜಕರಾಗಿ ವಿಶಾಲ್ ಜೆ ಅಮಿನ್ ರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಶಾಲ್ ಜೆ ಅಮಿನ್ ಅವರು ಪ್ರಸ್ತುತ  ಅಮೆರಿಕ ಸಂಸತ್ ನ ನ್ಯಾಯಾಂಗ ಸಮಿತಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 ಭಾರತೀಯ ಮೂಲದ ಅಮೆರಿಕ ನಿವಾಸಿ ವಿಶಾಲ್ ಜೆ ಅಮಿನ್ ಅವರನ್ನು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ತಮ್ಮ ಐಪಿ ತಜ್ಞರನ್ನಾಗಿ ನೇಮಿಸಿಕೊಂಡಿಕೊಂಡಿದ್ದು, ಬೌದ್ಧಿಕ ಹಕ್ಕುಸ್ವಾಮ್ಯ, ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್​ಗಳಿಗೆ  ಸಂಬಂಧಪಟ್ಟಂತೆ ಅಮೆರಿಕದ ಕಾನೂನು ಜಾರಿ ನೀತಿನಿರೂಪಣೆಯಲ್ಲಿ ಕಾರ್ಯ ನಿರ್ವಹಿಸಲು ವಿಶಾಲ್ ಅವರುನ್ನು ನೇಮಿಸಲಾಗಿದ್ದು, ಇನ್ನು ಮುಂದೆ, ಅಮೆರಿಕದ ಅಧ್ಯಕ್ಷರ ಶ್ವೇತಭವನದಲ್ಲಿ ಕಾರ್ಯಕಾರಿ ಕಚೇರಿಯಲ್ಲಿ ಐಪಿ ಜಾರಿ  ಸಂಯೋಜನಾಧಿಕಾರಿಯಾಗಿ ವಿಶಾಲ್ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ, ಒಬಾಮಾ ಆಡಳಿತದಲ್ಲಿ ಡೇನಿಯಲ್ ಮಾರ್ಟಿ ಈ ಸ್ಥಾನವನ್ನು ಅಲಂಕರಿಸಿದ್ದರು.

2008ರಲ್ಲಿ ಕಾಪಿ ಅಥವಾ ನಕಲು ತಡೆಗಾಗಿ ಮೊದಲ ಬಾರಿಗೆ ಈ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಆನ್ ಲೈನ್ ನೀತಿ-ನಿಯಮ ಉಲ್ಲಂಘನೆ, ಅಕ್ರಮ ಜಾಹಿರಾತು ಮಾರಾಟ ಜಾಲ, ಪ್ರಮುಖ ಸ್ಟುಡಿಯೋಗಳಲ್ಲಿನ ಕಾರ್ಯಕಲಾಪ,  ಇಂಟರ್ನೆಟ್ ಮತ್ತು ನೆಟ್ವರ್ಕ್ ಮಾರಾಟ ವ್ಯವಸ್ಥೆಗಳೆಲ್ಲೂ ಈ ಐಪಿ ಹುದ್ದೆಯ ಅಡಿಯಲ್ಲಿ ಬರುತ್ತದೆ. ವಿಶಾಲ್ ಈ ಹಿಂದೆಯೂ ಜಾರ್ಜ್ ಡಬ್ಲ್ಯು ಬುಷ್ ಆಡಳಿತದಲ್ಲಿ ಶ್ವೇತಭವನದಲ್ಲಿ ಅಧಿಕಾರದಲ್ಲಿದ್ದರು. ವಿಶಾಲ್ ತಮ್ಮ ಕಾನೂನು  ಪದವಿ ಮತ್ತು ನರವಿಜ್ಞಾನ ಪದವಿಯನ್ನು ಅಮೆರಿಕದಲ್ಲೇ ವ್ಯಾಸಂಗ ಮಾಡಿದ್ದಾರೆ.

SCROLL FOR NEXT