ವಿದೇಶ

ಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಭಾರತೀಯ ಹಡಗು ಬಿಡುಗಡೆ, 9 ಸಿಬ್ಬಂದಿ ಒತ್ತೆಯಾಳು!

Srinivasamurthy VN

ಮೊಗದಿಶು: ಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಭಾರತೀಯ ಸರಕು ಸಾಗಾಣಿಕಾ ಹಡಗನ್ನು ಸೊಮಾಲಿಯಾ ಭದ್ರತಾ ಪಡೆಗಳು ರಕ್ಷಿಸಿದ್ದು, ಹಡಗನ್ನು ಸುರಕ್ಷಿತವಾಗಿ ಬಿಡಗೆಡೆ ಮಾಡಲಾಗಿದೆ. ಆದರೆ ಹಡಗಿನಲ್ಲಿದ್ದ 9 ಸಿಬ್ಬಂದಿಗಳನ್ನು  ಕಡಲ್ಗಳ್ಳರು ಅಪಹರಿಸಿ ಅವರನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದಾರೆ.

ಅಲ್ ಕಸೂರ್ ಎಂಬ ಸರಕು ಸಾಗಣಿಕಾ ಹಡಗನ್ನು ಕಡಲ್ಗಳ್ಳರು ಹೈಜಾಕ್ ಮಾಡಿದ್ದರು. ವಿಚಾರ ತಿಳಿದ ಕೂಡಲೇ ದಾಳಿ ಮಾಡಿ ಹಡಗನ್ನು ರಕ್ಷಿಸಿ ಹಡಗಿನಲ್ಲಿದ್ದ ಇಬ್ಬರು ಸಿಬ್ಬಂದಿಯನ್ನೂ ಕೂಡ ರಕ್ಷಿಸಲಾಗಿದೆ. ಆದರೆ ಹಡಗಿನಲ್ಲಿದ್ದ  ಇತರೆ 9 ಮಂದಿ ಸಿಬ್ಬಂದಿಗಳನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. ಎಲ್ ಹರ್ ಮತ್ತು ಹರ್ದೀರ್ ಕರಾವಳಿ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಕಡಲ್ಗಳ್ಳರಿಂದ ಅಪಹರಣಕ್ಕೀಡಾಗಿರುವ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಗಾದೆ ಎಂದು  ಸೊಮಾಲಿಯಾದ ಗಲ್ ಮಡುಗು ಉಪಾಧ್ಯಕ್ಷ ಮಹಮದ್ ಹಶಿ ಅರಬೇ ತಿಳಿಸಿದ್ದಾರೆ.

ಗಲ್ ಮಡುಗು ಅಫ್ರಿಕಾದ ಸ್ವತಂತ್ರ್ಯ ಭದ್ರತಾ ಪಡೆಯನ್ನು ಹೊಂದಿರುವ ದೇಶವಾಗಿದ್ದು, ಕರಾವಳಿಯಲ್ಲಿ ತನ್ನದೇ ಆದ ಸೇನಾಪಡೆಗಳನ್ನು ರಕ್ಷಣೆಗೆ ನಿಯೋಜಿಸಿದೆ.

ಭಾರತೀಯ ಜೈಲಿನಲ್ಲಿರುವ ಕಡಲ್ಗಳ್ಳರ ಬಿಡುಗಡೆಗೆ ಆಗ್ರಹಿಸಿದ ಸೊಮಾಲಿಯ ಕಡಲ್ಗಳ್ಳರು
ಇನ್ನು ಪ್ರಸ್ತುತ ಭಾರತೀಯ 9 ಮಂದಿ ಹಡುಗು ಸಿಬ್ಬಂದಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಸೊಮಾಲಿಯಾ ಕಡಲ್ಗಳ್ಳರು, ಭಾರತದಲ್ಲಿರುವರುವ ತಮ್ಮ ಕಡಲ್ಗಳ್ಳರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.  ಈವರೆಗೂ ವಿವಿಧ ಪ್ರಕರಣಗಳಲ್ಲಿ ಬಂಧಿಯಾಗಿರುವ ಸುಮಾರು 117 ಮಂದಿ ಕಡಲ್ಗಳ್ಳರು ಭಾರತದ ವಿವಿಧ ಜೈಲುಗಳಲ್ಲಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT