ಸಾಂದರ್ಭಿಕ ಚಿತ್ರ 
ವಿದೇಶ

'ಭಯೋತ್ಪಾದಕ ಕೃತ್ಯ' ಒಪ್ಪಿಕೊಂಡ ಸ್ಟಾಕ್ ಹಾಂ ಟ್ರಕ್ ದಾಳಿ ಶಂಕಿತ

ಕದ್ದ ಟ್ರಕ್ ಅನ್ನು ಬೇಕೆಂದಲೇ ಸ್ವೀಡನ್ ನ ರಾಜಧಾನಿಯಲ್ಲಿ ಜನರ ಮೇಲೆ ಓಡಿಸಿದ್ದಾಗಿ ತಿಳಿಸಿ ಭಯೋತ್ಪಾದಕ ಕೃತ್ಯವನ್ನು ಶಂಕಿತ ಒಪ್ಪಿಕೊಂಡಿದ್ದಾನೆ ಎಂದು ಅವರ ವಕೀಲ ಮಂಗಳವಾರ ಹೇಳಿದ್ದಾರೆ.

ಸ್ಟಾಕ್ ಹಾಂ: ಕದ್ದ ಟ್ರಕ್ ಅನ್ನು ಬೇಕೆಂದಲೇ ಸ್ವೀಡನ್ ನ ರಾಜಧಾನಿಯಲ್ಲಿ ಜನರ ಮೇಲೆ ಓಡಿಸಿದ್ದಾಗಿ ತಿಳಿಸಿ ಭಯೋತ್ಪಾದಕ ಕೃತ್ಯವನ್ನು ಶಂಕಿತ ಒಪ್ಪಿಕೊಂಡಿದ್ದಾನೆ ಎಂದು ಅವರ ವಕೀಲ ಮಂಗಳವಾರ ಹೇಳಿದ್ದಾರೆ. 
ನ್ಯಾಯಾಲಯದ ವಿಚಾರಣೆ ವೇಳೆ ೩೯ ವರ್ಷದ ಉಜ್ಬೇಕಿಸ್ಥಾನದ ರಖಮತ್ ಅಕಿಲೊವ್ ಭಯೋತ್ಪಾದಕ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ. ಕಳೆದ ವಾರ ನಡೆದ ಈ ದಾಳಿಯಲ್ಲಿ ಕನಿಷ್ಠ ೪ ಜನ ಮೃತಪಟ್ಟು ೧೫ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 
"ಅವರು ತಮ್ಮ ಭಯೋತ್ಪಾದಕ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರನ್ನು ಬಂಧಿಸಬಹುದು" ಎಂದು ಅಕಿಲೊವ್ ಪರ ವಕೀಲ ಜೋಹಾನ್ ಎರಿಕ್ಸನ್ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಇಬ್ಬರು ಸ್ವೀಡನ್ ಪ್ರಜೆಗಳು, ಒಬ್ಬ ಬೆಲ್ಜಿಯಂ ಮತ್ತು ಒಬ್ಬ ಬ್ರಿಟನ್ ಪ್ರಜೆ ಈ ಶುಕ್ರವಾರದ ದಾಳಿಯಲ್ಲಿ ಮೃತಪಟ್ಟಿದ್ದರು. ಒಂಭತ್ತು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT